ಭದ್ರತೆ, ಸ್ವಚ್ಛತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ...

Light Lead
Published on

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭರವಸೆ

ದರಿಯಾ ಬಹದ್ದೂರ್​ಘಡ ದ್ವೀಪಕ್ಕೆ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯಲ್ಲಿ ಪ್ರಕೃತಿದತ್ತ ಸಹಜ ಸೌಂದರ್ಯ ತಾಣಗಳು ಹೇರಳವಾಗಿದ್ದು ಅವು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಪ್ರದೇಶವಾಗಿದೆ. ಅನೇಕ ದ್ವೀಪಗಳೂ ಇದ್ದು, ಅಲ್ಲಿ ಭದ್ರತೆ, ಸ್ವಚ್ಛತೆ ಹಾಗೂ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಭರವಸೆ ನೀಡಿದರು.

Light-2

ಉಡುಪಿ ಮಲ್ಪೆಯ ಕರಾವಳಿ ಕಾವಲು ಪೊಲೀಸ್​ ಠಾಣೆಯ ವ್ಯಾಪ್ತಿಗೆ ಒಳಪಡುವ ದರಿಯಾ ಬಹದ್ದೂರ್​ಘಡ (ಲೈಟ್​ ಹೌಸ್​) ದ್ವೀಪ ಹಾಗೂ ಕೋಟೆ ದ್ವೀಪಕ್ಕೆ ಶಾಸಕರು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಮಂಗಳವಾರ ತೆರಳಿ ಪರಿಶೀಲಿಸಿ ಮಾತನಾಡಿದರು.

Light-3
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ನೇತೃತ್ವ ವಹಿಸಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠ ಡಾ. ಅರುಣಕುಮಾರ್​ ಕೆ., ಜಿಪಂ ಸಿಇಒ ಪ್ರತಿಕ್​ ಬಾಯಲ್​, ಜಿಲ್ಲಾ ಕರಾವಳಿ ಕಾವಲು ಪೊಲೀಸ್​ ಪಡೆಯ ವರಿಷ್ಠ ಮಿಥುನ್​ ಎಚ್​.ಎನ್​., ಇವರ ಮಾರ್ಗದರ್ಶನದಲ್ಲಿ ಬಹದ್ದೂರ್​ಘಡ ದ್ವೀಪ ಹಾಗೂ ಕೋಟೆ ದ್ವೀಪಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಕರಾವಳಿ ಕಾವಲು ಪೊಲೀಸ್​ ಉಪಾಧೀಕ್ಷಕ ತುಳಜಪ್ಪ ಸುಳ್ಳಿ, ಮಲ್ಪೆ

Light-4
ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ್​ ಸುವರ್ಣ, ಉರಗ ತಜ್ಞ ಸ್ನೇಕ್​ ಬಾಬಣ್ಣ, ಸಿಎಸ್​ಪಿ ಕೇಂದ್ರ ಕಚೇರಿಯ ಅಧಿಕಾರಿಗಳು, ಮಲ್ಪೆ ಕರಾವಳಿ ಕಾವಲು ಪೊಲೀಸ್​ ಠಾಣೆಯ ಪೊಲೀಸ್​ ನಿರೀಕ್ಷಕರು, ಅಧಿಕಾರಿಗಳು, ಮಲ್ಪೆ ಪೊಲೀಸ್​ ಠಾಣಾ ಅಧಿಕಾರಿಗಳು, ಕೆಎನ್​ಡಿ ಸಿಬ್ಬಂದಿ, ಉಡುಪಿ ನಗರಸಭಾ ಪೌರಕಾರ್ಮಿಕರು, ಬಂದರು, ಅರಣ್ಯ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸ್ಥಳೀಯ ವೈದ್ಯಾಧಿಕಾರಿಗಳು, ಅಗ್ನಿಶಾಮಕದಳದ ಅಧಿಕಾರಿ ಹಾಗೂ ಇಲಾಖೆಗಳ ಸಿಬ್ಬಂದಿ, ಮೀನುಗಾರರ ಸಂಘಟನೆಯ ಪದಾಧಿಕಾರಿಗಳು, ಜಲಕ್ರೀಡಾ ತರಬೇತುದಾರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net