ಶಂಕರಾಚಾರ್ಯರು ಹಿಂದು ಧರ್ಮದ ಪ್ರವರ್ತಕ   ವಿದ್ವಾನ್ ಎಂ.ಎಸ್. ವಿನಾಯಕ್ ಹೇಳಿಕೆ

blank

ದಾವಣಗೆರೆ: ಆದಿಗುರು ಶ್ರೀ ಶಂಕರಾಚಾರ್ಯರು ಹಿಂದು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದರು. ಅವರ ಪ್ರಯತ್ನ ಇಲ್ಲವಾಗಿದ್ದರೆ ಹಿಂದು  ಧರ್ಮದ ಅಸ್ತಿತ್ವವೇ ಇರುತ್ತಿರಲಿಲ್ಲ ಎಂದು ಶಿವಮೊಗ್ಗದ ವಿದ್ವಾನ್ ಎಂ.ಎಸ್. ವಿನಾಯಕ್ ಹೇಳಿದರು.
ನಗರದ ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ದೇವಸ್ಥಾನದಲ್ಲಿ ಶನಿವಾರ, ಶಂಕರಾಚಾರ್ಯರ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತಕ್ಕೆ ಶಂಕರರ ಕೊಡುಗೆ ವಿಚಾರವಾಗಿ ಉಪನ್ಯಾಸ ನೀಡಿದರು.
ಶಂಕರಾಚಾರ್ಯರು ಚಿಕ್ಕ ವಯಸ್ಸಿನಿಂದಲೇ ವೇದ, ಉಪನಿಷತ್ತುಗಳ ಬಗ್ಗೆ ಅರಿತಿದ್ದರು. ತಮ್ಮ 32 ವರ್ಷಗಳ ಜೀವಿತಾವಧಿಯಲ್ಲೂ ಉತ್ತಮ ಕಾರ್ಯಗಳನ್ನು ಮಾಡಿ ಹೆಸರಾಗಿದ್ದಾರೆ. ಅದ್ವೈತ ತತ್ವವನ್ನು ಸಾರಿದ್ದಾರೆ ಎಂದರು.
ಕಾಲ್ನಡಿಗೆಯಲ್ಲೇ ಭಾರತದಲ್ಲಿ ಸಂಚರಿಸಿದ್ದ ಶಂಕರರು ಭಾರತದ ವೈದಿಕ ಪರಂಪರೆ, ವೇದ ಉಪನಿಷತ್ತುಗಳು ಹಾಗೂ ಆಧ್ಯಾತ್ಮ ಜೀವನದ ಬಗ್ಗೆ ಸಾಕಷ್ಟು ವಿಚಾರವನ್ನು ವಿವರಿಸಿದ್ದಾರೆ. ಆಧ್ಯಾತ್ಮ ಸಾಧನೆ ಎಲ್ಲಾ ವರ್ಗದವರಿಗೂ ಸಂಬಂಧಿಸಿದ್ದು, ಅದನ್ನು ಎಲ್ಲರೂ ಉಳಿಸಬೇಕೆಂದು ಶಂಕರರು ಹೇಳಿದ್ದರು ಎಂದು ಸ್ಮರಿಸಿದರು.
ಮಾನವರು ಸಂಸಾರದ ಬಂಧನದಲ್ಲಿದ್ದರೂ ಪಾರಮಾರ್ಥಿಕ ಜೀವನ ನಡೆಸಬಹುದು ಎಂಬುದನ್ನು ಭಜಗೋವಿಂದಂ ಹಾಗೂ ಇತರ ಕೃತಿಗಳ ಮೂಲಕ ಸಾರಿದ್ದಾರೆ. ಅವರು ಕೃತಿಗಳು ಎಲ್ಲರ ಬದುಕಿಗೆ ದಾರಿಯಾಗಿವೆ ಎಂದು ಹೇಳಿದರು.
ಶ್ರೀ ಶಂಕರ ಸೇವಾ ಸಂಘದ ಉಪಾಧ್ಯಕ್ಷ ಮೋತಿ ಸುಬ್ರಮಣ್ಯ, ಕಾರ್ಯದರ್ಶಿ ಶ್ರೀನಿವಾಸ ಜೋಷಿ, ನಿರ್ದೇಶಕರಾದ ವಿನಾಯಕ ಜೋಷಿ, ಸುಬ್ಬಣ್ಣ ಮಂಡಕ್ಕಿ, ರಮೇಶ್ ಪಾಟೀಲ್, ಚೈತನ್ಯ ನಾರಾಯಣಸ್ವಾಮಿ, ಅನಿಲ್ ಬಾರೆಂಗಳ್ ಇತರರಿದ್ದರು.
ಬೆಳಗ್ಗೆ  ಶ್ರೀ ಶಂಕರಾಚಾರ್ಯರಿಗೆ ಮಹಾಪೂಜೆ ನಂತರ ಶೀ ಚಂದ್ರಮೌಳೀಶ್ವರರಿಗೆ ರುದ್ರಾಭಿಷೇಕ ನೆರವೇರಿತು. ಎಂ.ಎಸ್. ವಿನಾಯಕ ಅವರಿಂದ ಶಂಕರಭಾಷ್ಯ ಪಾರಾಯಣ ನಡೆಯಿತು.
ಸಂಜೆ ಶಂಕರಾಚಾರ್ಯರ ಉತ್ಸವಮೂರ್ತಿ ಕೂರಿಸುವ ಮೂಲಕ ದೇವಸ್ಥಾನ ಆವರಣದಲ್ಲೇ ಪಾಲಕಿ ಉತ್ಸವ ನಡೆಸಲಾಯಿತು. ಭಕ್ತರು ಭಾಗಿಯಾಗಿದ್ದರು.

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…