ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ-2024 ವಿರೋಧಿಸಿ ಸೋಷಿಯಲ್ ಡೆಮಾಕ್ರೆಟಿಕ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಖ್ತರ್ ರಜ್ಹಾ ವೃತ್ತದಿಂದ ಮದೀನಾ ಆಟೋ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಸೈಯದ್ ಅಶ್ಫಕ್, ವಕ್ಫ್‌ನ ಸಮಸ್ಯೆ ಕೇವಲ ಎಸ್‌ಡಿಪಿಐಗೆ ಸೀಮಿತವಲ್ಲ. ಜಾತ್ಯತೀತ ಆಧಾರದ ಮೇಲೆ ಮತ ಕೇಳುವ ಕಾಂಗೆಸ್ ಇಂದು ಎಲ್ಲಿದೆ. ಚುನಾವಣೆ ವೇಳೆ ಮುಸ್ಲಿಮರನ್ನು ವೋಟ್‌ಬ್ಯಾಂಕ್ ಆಗಿ ನೋಡುವ ಕಾಂಗ್ರೆಸಿಗರು ಮುಸ್ಲಿಮರ ಸಮಸ್ಯೆ ಬಂದಾಗ ಮೌನ ತಾಳುತ್ತಾರೆ. ವಕ್ಫ್ ಆಸ್ತಿ ಕಬಳಿಸುವ ಬಿಜೆಪಿ ಹುನ್ನಾರ ತಡೆಯಲು ಎಲ್ಲರೂ ಮುಂದಾಗಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್ ಮಾತನಾಡಿ ವಕ್ಫ್ ಆಸ್ತಿ ಕಬಳಿಸಲು ಹೊರಟಿರುವ ಬಿಜೆಪಿ ಸರ್ಕಾರದ ನಡೆ ಮುಸ್ಲಿಮರ ವಿರುದ್ಧದ ದ್ವೇಷದ ಮುಂದುವರಿದ ಭಾಗವಾಗಿದೆ. ತ್ರಿವಳಿ ತಲಾಖ್‌ಗಿಂತಲೂ ಉದ್ಯೋಗ, ಮಹಿಳೆಯ ಸುರಕ್ಷತೆ, ಉಚಿತ ಶಿಕ್ಷಣ- ಆರೋಗ್ಯ ಕಲ್ಪಿಸುವುದು ಇಂದಿನ ಸಮಸ್ಯೆಯಾಗಿದೆ. ಇದರ ಪರಿಹಾರಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಯಹಿಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾ ಉಪಾಧ್ಯಕ್ಷ ರಜ್ವಿ  ರಿಯಾಜ್ ಅಹಮದ್, ಮೊಹಮ್ಮದ್ ಅಜರುದ್ದೀನ್, ಮಹಮ್ಮದ್ ಶೋಯಿಬ್, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ಖಾನ್, ಸುರೇಶ್, ನೆರಳು ಬೀಡಿ ಕಾರ್ಮಿಕರ ಸಂಘದ ಕರಿಬಸಪ್ಪ, ಜಬೀನಾಖಾನಂ, ಆರಿಫ್ ಇತರರಿದ್ದರು.
—-

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…