More

  ಕೃಷಿ ಪದ್ಧತಿ ಸುಧಾರಣೆಗೆ ಕ್ರಮವಾಗಲಿ   ರೈತರ ಕಾರ್ಯಾಗಾರದಲ್ಲಿ  ವಾಮದೇವಪ್ಪ ಸಲಹೆ  


  ದಾವಣಗೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತೀಯ ಕೃಷಿ ಪದ್ಧತಿ ಸುಧಾರಿಸಲು ಪ್ರಥಮ ಆದ್ಯತೆಯಲ್ಲಿ ರೈತರ ಸಮಸ್ಯೆ ಪರಿಹರಿಸಬೇಕು. ಆಗ ಮಾತ್ರ ದೇಶದ ಆರ್ಥಿಕ ಪ್ರಗತಿಯಲ್ಲಿ ರೈತರ ಕೊಡುಗೆ ಅಧಿಕವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ಕಿಸಾನ್ ಸಂಘದ ಸಹಯೋಗದಲ್ಲಿ ನಗರದ  ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ರೈತರ ಕಾರ್ಯಾಗಾರ ಹಾಗೂ ಕೃಷಿಕರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
  ಸರ್ಕಾರಗಳಿಂದ ರೈತರಿಗೆ ದೊರಕುವ ಸೌಲಭ್ಯ ಹಾಗೂ ಆಧುನಿಕ ಬೇಸಾಯ ಪದ್ಧತಿಗೆ ಬೇಕಾಗುವ ಸವಲತ್ತುಗಳನ್ನು  ಕಾರ್ಯಕ್ರಮ ಸಂಪೂರ್ಣ ತಿಳಿಸುವಂತಾಗಲಿ ಎಂದು ಆಶಿಸಿದರು.
  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಜಿ. ರುದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಪರಿಸ್ಥಿತಿ ಸುಧಾರಿಸುವಲ್ಲಿ ಸರ್ಕಾರಗಳ ಪಾತ್ರ ಪ್ರಮುಖವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದ ಸಮಸ್ಯೆ ನಿವಾರಿಸಿ ರೈತರ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
  ರೈತರ ಜೀವನಮಟ್ಟ ಇತರ ಎಲ್ಲ ಉದ್ಯೋಗಗಳಿಗಿಂತ ಉತ್ತಮವಾದದ್ದು ಎಂಬ ಸ್ಥಿತಿಗೆ ಬರುವಂತಾಗಬೇಕು. ಆಗ ಮಾತ್ರ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ ಎಂದು ತಿಳಿಸಿದರು.
  ಕೃಷಿ ತಜ್ಞ ಡಾ. ಪಿ.ಎಸ್. ರಂಜಿತ್‌ಕುಮಾರ್ ರೈತರಿಗೆ ಬೇಕಾಗುವ ಹಾಗೂ ಅನುಸರಿಸಬೇಕಾದ ಉಪಯುಕ್ತ ಹಾಗೂ ಲಾಭದಾಯಕ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.
  ಕೆನರಾ ಲೀಡ್ ಬ್ಯಾಂಕಿನ ಅಧಿಕಾರಿ ಶಿವಪ್ಪ, ಸೇವಾ ಕಾರ್ಯಕರ್ತ ರೂಪೇಶ್ ಇತರರು ಇದ್ದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವೇದಾನಂದ ಹೊನ್ನೇಬಾಗಿ ಸ್ವಾಗತಿಸಿದರು. ಸಂಚಾಲಕ ಅಶೋಕ್ ದುರ್ವಿಗೆರೆ ನಿರೂಪಿಸಿ, ವಂದಿಸಿದರು.

  See also  ಸಮರ್ಪಣೆ ಸಾಧನೆ ಕಡೆಗೆ ಗಮನವಿರಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts