ರಮೇಶ ಜಹಗೀರದಾರ್, ದಾವಣಗೆರೆ
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಸಮಗ್ರ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ) ಮೂಲಕ ಮಾಡಿರುವ ಸಾಧನೆಗಾಗಿ ಇತ್ತೀಚೆಗಷ್ಟೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ಗೆ ಈಗ ಮತ್ತೊಂದು ಪ್ರಶಸ್ತಿಯ ಗರಿ ಲಭಿಸಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕ ಸುರಕ್ಷತೆಗೆ ಕೈಗೊಂಡ ಕ್ರಮಗಳಿಗಾಗಿ ಪ್ರತಿಷ್ಠಿತ ‘ಗವರ್ನನ್ಸ್ ನವ್’ ಪ್ರಶಸ್ತಿಗೆ ದಾವಣಗೆರೆ ಸ್ಮಾರ್ಟ್‌ಸಿಟಿ ಭಾಜನವಾಗಿದೆ.
ಹೈದರಾಬಾದ್‌ನಲ್ಲಿ ಬುಧವಾರ ನಡೆದ ‘ಗವರ್ನನ್ಸ್ ನವ್ ಸೌತ್ ಗವ್-ಟೆಕ್ ಸಿಂಪೋಜಿಯಮ್ ಆ್ಯಂಡ್ ಅವಾರ್ಡ್ಸ್ 2024’ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿಜಿಎಂ ಮಮತಾ ಅವರು ದಾವಣಗೆರೆ ಸ್ಮಾರ್ಟ್‌ಸಿಟಿಯನ್ನು ಪ್ರತಿನಿಧಿಸಿದರು.
ಪೊಲೀಸ್, ಶಿಕ್ಷಣ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ, ಕೆಎಸ್‌ಆರ್‌ಟಿಸಿ ಸೇರಿ ಸರ್ಕಾರದ ವಿವಿಧ ಇಲಾಖೆಗಳ ಜತೆಗೆ ಸಮನ್ವಯ ಸಾಧಿಸಿ, ಮಾಹಿತಿಗಳ ವಿನಿಮಯ, ತಾಂತ್ರಿಕ ನೆರವು ನೀಡುತ್ತ ಬಂದಿರುವ ಸ್ಮಾರ್ಟ್‌ಸಿಟಿಯ ಚಟುವಟಿಕೆಗಳು ವಿಭಿನ್ನತೆ ಹಾಗೂ ವಿಶಿಷ್ಟತೆಯಿಂದಾಗಿ ಗಮನ ಸೆಳೆದಿವೆ.
ವಿಶೇಷವಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಆಡಳಿತದಲ್ಲಿ ಸುಗಮ ನಿರ್ವಹಣೆಗೆ ನೆರವಾಗುವುದು, ಜತೆಗೆ ಸಾರ್ವಜನಿಕ ಬದುಕನ್ನು ಸ್ಮಾರ್ಟ್‌ಗೊಳಿಸುವ ನಿಟ್ಟಿನಲ್ಲಿ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತ ಬಂದಿದೆ.
…
(ಬಾಕ್ಸ್)
ಕ್ಯಾಮೆರಾ ಕಣ್ಗಾವಲು
ಸುರಕ್ಷತೆಯ ದೃಷ್ಟಿಯಿಂದ ನಗರದ ವಿವಿಧ ವೃತ್ತ ಹಾಗೂ ರಸ್ತೆಗಳಲ್ಲಿ ಅತ್ಯಾಧುನಿಕ 304 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ 45 ಎಎನ್‌ಪಿಆರ್ ಕ್ಯಾಮೆರಾಗಳಿದ್ದು ಅವುಗಳ ಕಣ್ಗಾವಲಿನಿಂದ ಸುರಕ್ಷತೆ ಒದಗಿಸಲು ಸಹಾಯಕವಾಗಿದೆ.
ಸಂಚಾರ ನಿಯಮಗಳ ಉಲ್ಲಂಘನೆ, ವಿವಿಧ ಅಪರಾಧ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ಈ ಕ್ಯಾಮೆರಾಗಳೇ ಕಣ್ಣಾಗಿವೆ. ಎಎನ್‌ಪಿಆರ್ ಕ್ಯಾಮೆರಾಗಳು ವಾಹನಗಳನ್ನು ಗುರುತಿಸುವಲ್ಲಿ ಶೇ. 95 ರಷ್ಟು ನಿಖರತೆಯನ್ನು ತೋರಿವೆ.
ನಗರದ ಶಾಲಾ ಬಸ್‌ಗಳ ಮಾಹಿತಿಯನ್ನು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಹೊಂದುವ ಮೂಲಕ ಮಕ್ಕಳ ಸುರಕ್ಷತೆಗೆ ಗಮನ ಹರಿಸಲಾಗಿದೆ. ಈ ಕುರಿತಾದ ಮಾಹಿತಿಯನ್ನು ವಿದ್ಯಾರ್ಥಿಗಳ ಪಾಲಕರಿಗೆ ಶೀಘ್ರವೇ ನೀಡಲಾಗುವುದು.
ಎರಡು ವರ್ಷಕ್ಕೊಮ್ಮೆ ನಡೆಯುವ ನಗರ ದೇವತೆ ದುರ್ಗಾಂಬಿಕಾ ಜಾತ್ರೆಗೆ ಲಕ್ಷಾಂತರ ಭಕ್ತರು ನಾಡಿನ ವಿವಿಧೆಡೆಯಿಂದ ಬರುತ್ತಾರೆ. ಆ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಸವಾಲಿನ ಕೆಲಸ. ಸ್ಮಾರ್ಟ್‌ಸಿಟಿಯ ಸಿಬ್ಬಂದಿ ಡ್ರೋನ್ ಕ್ಯಾಮೆರಾ ಮೂಲಕ ಜಾತ್ರೆಯ ವಿವಿಧ ಸ್ಥಳಗಳ ಚಿತ್ರಣವನ್ನು ಸೆರೆ ಹಿಡಿದು, ಎಲ್ಲೆಲ್ಲಿ ಏನೇನು ಬೆಳವಣಿಗೆಗಳು ಆಗುತ್ತಿವೆ. ಸಂಚಾರ ಸಮಸ್ಯೆ ಆಗಿದೆಯೆ, ಭಕ್ತರಿಗೆ ಎಲ್ಲಾದರೂ ಅನನುಕೂಲ ಉಂಟಾಗಿದೆಯೆ, ನೂಕುನುಗ್ಗಲು ಆಗಿದೆಯೆ ಇತ್ಯಾದಿ ಮಾಹಿತಿಯನ್ನು ಒದಗಿಸುವ ಮೂಲಕ ಪೊಲೀಸ್ ಇಲಾಖೆಗೆ ನೆರವಾಗಿದ್ದಾರೆ.
…
* ಪ್ರತಿ ದಿನ ಸಂಚಾರ ನಿಯಮಗಳ ಉಲ್ಲಂಘನೆಯ 5 ಸಾವಿರದಿಂದ 10 ಸಾವಿರ ಪ್ರಕರಣಗಳನ್ನು ಪತ್ತೆಹಚ್ಚಿ ಮಾಹಿತಿ ನೀಡಲಾಗುತ್ತಿದೆ
* ಸಾರ್ವಜನಿಕ ದೂರು ವಿಭಾಗಕ್ಕೆ 900 ದೂರುಗಳು ಬಂದಿದ್ದು ಅವುಗಳಲ್ಲಿ ಶೇ. 98 ರಷ್ಟನ್ನು ಬಗೆಹರಿಸಲಾಗಿದೆ.
* ಪೊಲೀಸರಿಗೆ ನೀಡಲಾದ ಎಂಎಸ್‌ವಿ ವಾಹನಗಳ ಸಹಾಯದಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಲಾಗಿದೆ.
* ಸ್ಮಾರ್ಟ್‌ಸಿಟಿ ಕ್ಯಾಮೆರಾಗಳ ಜತೆಗೆ 5 ಸಾವಿರಕ್ಕೂ ಹೆಚ್ಚು ವಾಣಿಜ್ಯ ಉದ್ದೇಶದ ಕ್ಯಾಮೆರಾಗಳ ಜಿಯೋಮ್ಯಾಪ್ ಮಾಡಲಾಗಿದೆ.
…
ದಾವಣಗೆರೆ ಸ್ಮಾರ್ಟ್‌ಸಿಟಿ ಸಾಧನೆಗೆ ಮತ್ತೊಂದು ಗರಿ
ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …
ಬೆಂಗಳೂರು: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…