ತಹಸೀಲ್ದಾರ್ ಕಚೇರಿ ಸ್ವಚ್ಛತೆಗೆ ಗಡುವು

ದಾವಣಗೆರೆ : ನಗರದ ತಹಸೀಲ್ದಾರ್ ಕಚೇರಿ ಕಟ್ಟಡವನ್ನು ಹದಿನೈದು ದಿನದಲ್ಲಿ ಶುಚಿಗೊಳಿಸಿ ನೈರ್ಮಲ್ಯ ಕಾಪಾಡಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಡುವು ನೀಡಿದರು.  ದಾವಣಗೆರೆ ಸಿವಿಕ್ ಫೋರಂ ಹಾಗೂ ರೈತ ಸಂಘದ ಸಹಯೋಗದಲ್ಲಿ ನಗರದ ತಹಸೀಲ್ದಾರ್ ಕಚೇರಿ ಕಟ್ಟಡದ ಸ್ವಚ್ಛತೆ ಕಾರ್ಯ ಪ್ರಾರಂಭಿಸಿ ಗುರುವಾರ ಮಾತನಾಡಿದರು.  ರೈತ ಭವನದಲ್ಲಿ ತಹಸೀಲ್ದಾರ್ ಕಚೇರಿ ನಡೆಯುತ್ತಿದೆ. ನೈರ್ಮಲ್ಯ ಕಾಪಾಡದ ಕಾರಣ ಕಟ್ಟಡವೇ ದುರ್ಬಲವಾಗಿದೆ. ಕೋಟ್ಯಂತರ ರೂ. ತೆರಿಗೆ ಹಣ ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ಅಧಿಕಾರಿಗಳ ನಿರ್ಲಕ್ಷೃದಿಂದ ಹಾಳಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ತಹಸೀಲ್ದಾರ್ ಅವರು ಜವಾಬ್ದಾರಿ ತೆಗೆದುಕೊಂಡು ಇನ್ನು ಹದಿನೈದು ದಿನದಲ್ಲಿ ಕಟ್ಟಡ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ದಾವಣಗೆರೆ ಸಿವಿಕ್ ಫೋರಂ ಜತೆ ರೈತರು ನೈರ್ಮಲ್ಯ ಕಾರ್ಯ ಮಾಡುತ್ತಾರೆ ಎಂದು ಎಚ್ಚರಿಸಿದರು.  ಸಿವಿಕ್ ಫೋರಂ ಅಧ್ಯಕ್ಷ ಮಲ್ಲಿಕಾರ್ಜುನ್ ಕಬ್ಬೂರು ಮಾತನಾಡಿ, ಕಟ್ಟಡ ಸ್ವಚ್ಛತೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಅವರು ಕಟ್ಟಡದ ತಾರಸಿ ಸ್ವಚ್ಛಗೊಳಿಸಿ, ಅಲ್ಲಿನ ಗಿಡ ಗಂಟಿ ತೆಗೆಸಿದ್ದಾರೆ. ಇದನ್ನು ಫೋರಂ ಸ್ವಾಗತಿಸುತ್ತದೆ ಎಂದರು.  ಕಟ್ಟಡವು ಇನ್ನೂ ದೂಳು ಹಾಗೂ ಜೇಡರ ಬಲೆಯಿಂದ ಆವರಿಸಿದೆ. ಇದನ್ನು ಸಹ ಸ್ವಚ್ಛಗೊಳಿಸಬೇಕು. ಇಲ್ಲಿಗೆ ಬರುವ ರೈತರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.  ಸಿವಿಕ್ ಪೋರಂ ಗೌರವಾಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಕಚೇರಿಗೆ ಬರುವ ರೈತರಿಗೆ ಕನಿಷ್ಠ ಸೌಲಭ್ಯ ನೀಡುವುದು ತಹಸೀಲ್ದಾರ್ ಅವರ ಕರ್ತವ್ಯ. ಕೂಡಲೇ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.  ಫೋರಂ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರ್‌ನಾಯ್ಕ,  ವಿಶ್ವನಾಥ್ ಮಂಡಲೂರು, ಕಾಳೇಶ್ ಯಲೋದಳ್ಳಿ, ಬಸವರಾಜ್ ದಾಗೀನಕಟ್ಟೆ, ಭರವಗೌಡ್ರು, ಅಗಸನಕಟ್ಟೆ ಬಸವರಾಜ್, ಚನ್ನಬಸಪ್ಪ ನಲ್ಕುದುರೆ, ರಮೇಶ್ ಸಿದ್ದನೂರು ಇತರರು ಇದ್ದರು.  ಕೋಟ್..  ಕಟ್ಟಡ ಎಪಿಎಂಸಿಗೆ ಸೇರಿದ್ದು, ಸುತ್ತಲೂ ಸಾಕಷ್ಟು ದೂಳು ಇರುವುದರಿಂದ ಕಟ್ಟಡ ಅನೈರ್ಮಲ್ಯಕ್ಕೀಡಾಗಿದೆ. ಪೋರಂ ನೀಡಿದ ಮನವಿಯಿಂದ ಎಚ್ಚೆತ್ತುಕೊಂಡು ಸ್ವಚ್ಛತೆ ಮಾಡಿಸಲಾಗುತ್ತಿದೆ. ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕೂಡಲೇ ಮಾಡಲಾಗುವುದು.   ಸಂತೋಷ್‌ಕುಮಾರ್ ಪಾಟೀಲ್  ಉಪ ವಿಭಾಗಾಧಿಕಾರಿ.

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…