

ಅಬುಧಾಬಿ: ಶ್ರೀಲಂಕಾದ ಮಾಜಿ ನಾಯಕ ದಸುನ್ ಶನಕ ಅಬುಧಾಬಿ ಟಿ10 ಲೀಗ್ನಲ್ಲಿ ಬಾಂಗ್ಲಾ ಟೈಗರ್ಸ್ ತಂಡದ ಪರ ಡೆಲ್ಲಿ ಬುಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 3 ಕ್ರಮಬದ್ಧ ಎಸೆತಗಳಲ್ಲೇ 30 ರನ್ ಬಿಟ್ಟುಕೊಟ್ಟಿದ್ದಾರೆ.
ಪಂದ್ಯದ 9ನೇ ಓವರ್ ಎಸೆದ ಶನಕ, ಮೊದಲ 4 ಎಸೆತಗಳಲ್ಲಿ ಬೌಂಡರಿ ಬಿಟ್ಟುಕೊಟ್ಟರು. ಈ ಪೈಕಿ 2 ನೋಬಾಲ್ ಆಗಿತ್ತು. 3ನೇ ಎಸೆತದಲ್ಲಿ ಸಿಕ್ಸರ್ ಬಿಟ್ಟುಕೊಟ್ಟರು. 4ನೇ ಕ್ರಮಬದ್ಧ ಎಸೆತಕ್ಕೆ ಮುನ್ನ ಮತ್ತೆ 2 ನೋಬಾಲ್ ಎಸೆದ ಶನಕ, ಈ ಪೈಕಿ ಒಂದು ಬೌಂಡರಿ ನೀಡಿದರು. ಇದರಿಂದಾಗಿ ಓವರ್ನ 4ನೇ ಕ್ರಮಬದ್ಧ ಎಸೆತಕ್ಕೆ ಮುನ್ನ ಅವರು 30 ರನ್ ಬಿಟ್ಟುಕೊಟ್ಟಂತಾಯಿತು. ಆ ಓವರ್ನಲ್ಲಿ ಅವರು ಒಟ್ಟು 33 ರನ್ ನೀಡಿದರು.