
ಉಳ್ಳಾಲ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಉಳ್ಳಾಲ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಉಳ್ಳಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.22ರಂದು ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಸ್ಪೀಕರ್ ಯು.ಟಿ.ಖಾದರ್ ವಾರ್ಗದರ್ಶನದಲ್ಲಿ ನಡೆಯಲಿದೆ.
ಪುರುಷ, ಮಹಿಳೆಯರಿಗೆ ಸ್ಪರ್ಧೆಗಳು:
ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್, ಅಥ್ಲೆಟಿಕ್ಸ್ ಸ್ಪರ್ಧೆಗಳು (100, 200, 400, 800, 1,500, 5,000, ಉದ್ದಜಿಗಿತ, ಎತ್ತರ ಜಿಗಿತ, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಟ್ರಿಪಲ್‌ಜಂಪ್, 4*100ಮೀ ಮತ್ತು 4*400ಮೀ ರಿಲೇ), ಮಹಿಳೆಯರಿಗೆ ಕಬಡ್ಡಿ, ಖೋಖೋ, ವಾಲಿಬಾಲ್,ಥ್ರೋಬಾಲ್, ಅಥ್ಲೆಟಿಕ್ಸ್ ಸ್ಪರ್ಧೆಗಳು (100ಮೀ, 200, 400, 800, 1,500, 3,000) ಶಾಟ್‌ಪುಟ್, ಉದ್ದ ಜಿಗಿತ, ಎತ್ತರ ಜಿಗಿತ, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಟ್ರಿಪಲ್‌ಜಂಪ್ ಮತ್ತು 4*100ಮೀ, 4*400ಮೀ. ರಿಲೇ ನಡೆಯಲಿದೆ.
ಪಂದ್ಯಾಟ ಉದ್ಘಾಟನೆಗೆ ಮೊದಲು ಎಲ್ಲ ಸ್ಪರ್ಧೆಗಳು ಪ್ರಾರಂಭವಾಗಲಿದೆ. ಬೆಳಗ್ಗೆ 8.30ಕ್ಕೆ ಪುರುಷರ ವಿಭಾಗದ 5,000 ಮೀ. ಓಟ ಮತ್ತು ಮಹಿಳೆಯರ ವಿಭಾಗದ 3000 ಮೀ. ಓಟ ಸ್ಪರ್ಧೆಗಳು ನಡೆಯಲಿರುವುದು. ಇತರ ವೈಯಕ್ತಿಕ ಕ್ರೀಡಾ ಸ್ಪರ್ಧೆಗಳು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯಲಿದೆ. ಎಲ್ಲ ಸ್ಪರ್ಧಿಗಳು ಬೆಳಗ್ಗೆ 8ಕ್ಕೆ ಕ್ರೀಡಾಂಗಣದಲ್ಲಿ ಹಾಜರಿದ್ದು, ಸ್ಥಳದಲ್ಲೇ ನೋಂದಾಯಿಸುವ ಅವಕಾಶ ಇದೆ. ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡ 9 ಗಂಟೆಯೊಳಗೆ ಸ್ಥಳದಲ್ಲಿ ವರದಿ ವಾಡಿಕೊಳ್ಳಬೇಕು ಎಂದು ಕ್ರೀಡಾಕೂಟದ ನೋಡಲ್ ಅಧಿಕಾರಿ ತ್ಯಾಗಮ್ ಹರೇಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.