

Bengaluru: ನಟ ದರ್ಶನ್ ತೂಗುದೀಪ್ ಜೊತೆಗೆ ಕಳೆದ 25 ವರ್ಷಗಳಿಂದ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಹೊನ್ನೇಗೌಡ ಅವರು ಇಂದು (ಮೇ.20) ನಿಧನರಾಗಿದ್ದಾರೆ.
ಅವರ ಅಗಲುವಿಕೆಗೆ ನಟ ದರ್ಶನ್ ಸಂತಾಪ ಸೂಚಿಸಿದ್ದಾರೆ, ಈ ಕುರಿತು ನಟ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
'25 ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ್ರು ಇಂದು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು.ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ' ಎಂದು ದರ್ಶನ್ ತಮ್ಮ ಎಕ್ಸ್ ನಲ್ಲಿ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)