ದರ್ಶನ್ 55ನೇ ಸಿನಿಮಾ ಘೋಷಣೆ; ಮತ್ತೆ ಒಂದಾಯ್ತು ಯಜಮಾನ ತಂಡ

darshan
Published on

ಬೆಂಗಳೂರು: ಸದ್ಯ ಕರ್ನಾಟಕದಲ್ಲಿ ನಟ ದರ್ಶನ್​ ವಿಚಾರ ಹೆಚ್ಚಾಗಿಯೇ ಸುದ್ದಿಯಾಗುತ್ತಿದೆ. ಸಾಲದ ಹೆಸರಿನಲ್ಲಿ ದರ್ಶನ್​ಗೆ ಮೋಸ ಮಾಡಲು ಹೊರಟಿದ್ದ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಹೀಗಿರುವಾಗಲೇ ದರ್ಶನ್​ 55ನೇ ಸಿನಿಮಾ ಬಗ್ಗೆಯೂ ಕೆಲ ಮಾಹಿತಿ ಹೊರಬಿದ್ದಿದೆ.

ದರ್ಶನ್​ 55ನೇ ಸಿನಿಮಾವನ್ನು ವಿ ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ಶೈಲಜಾ ರಾಜ್ ಮತ್ತು ಬಿ ಸುರೇಶ್ ಸಿನಿಮಾಕ್ಕೆ ಹಣ ಹೂಡಲಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈ ವಿಚಾರವನ್ನು ಸ್ವತಃ ಶೈಲಜಾ ರಾಜ್ ಅವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಹಳ ಅಭಿಮಾನದಿಂದ ಡಿ55 ಟೇಕ್ ಆಫ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಹರಿಕೃಷ್ಣ, ಬಿ ಸುರೇಶ್, ದರ್ಶನ್ ಜತೆ ತಾವಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಅಂದ ಹಾಗೆ ಇದೇ ತಂಡ ಹಿಂದೆ ಯಜಮಾನ ಸಿನಿಮಾದಲ್ಲೂ ಕಾಣಿಸಿಕೊಂಡಿತ್ತು. ಆ ಸಿನಿಮಾದಲ್ಲಿ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವಿ ಹರಿಕೃಷ್ಣ ನಿರ್ದೇಶನದ ಜವಬ್ದಾರಿ ಹೊತ್ತಿದ್ದರು. ಬಿ ಸುರೇಶ್ ಮತ್ತು ಶೈಲಜಾ ರಾಜ್ ನಿರ್ಮಾಣ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net