

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ದರ್ಶನ್ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ದರ್ಶನ್ ಅವರು ಪರಪ್ಪನ ಅಗ್ರಹಾರ ಸೇರಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಗ್ಗೆ ರಾಜ್ಯಾದ್ಯಂತ ಅಂತೆ-ಕಂತೆ ಚರ್ಚೆಯಾಗುತ್ತಿದೆ.
ಜೈಲಿನ ಊಟಕ್ಕೆ ಹೊಂದಿಕೊಳ್ಳಲು ಆಗದೆ ದರ್ಶನ್ ಒದ್ದಾಡುತ್ತಿದ್ದಾರೆ. ಊಟ ಹೊಂದಾಣಿಕೆ ಆಗದೆ ಒದ್ದಾಡುತ್ತಿದ್ದಾರೆ. ಈ ವೇಳೆ ನಟ ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಿದ್ದರು? ಎಷ್ಟು ಸಿಗರೇಟ್ ಸೇದುತ್ತಿದ್ದರು? ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಹಾಗಾದರೆ, ನಿಜಕ್ಕೂ ನಟ ದರ್ಶನ್ ತೂಗುದೀಪ್ ಮದ್ಯಪಾನ ಮಾಡ್ತಾ ಇದ್ರಾ? ಸಿಗರೇಟು ಸೇದ್ತಾ ಇದ್ರಾ ದರ್ಶನ್? ಎಂದು ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ, ನಟ ದರ್ಶನ್ ಅವರು ಮದ್ಯಪಾನ ಇದ್ದಿದ್ದು ನಿಜ. ಯಾಕಂದ್ರೆ ತಮ್ಮ ಬಗ್ಗೆ ತಾವೇ ಮಾತನಾಡುವಾಗ ದರ್ಶನ್ ತಾವು ಎಣ್ಣೆ ಕುಡಿಯುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಎಲ್ಲಿಯೂ ದರ್ಶನ್ ಅವರು ಎಷ್ಟು ಎಣ್ಣೆ ಕುಡಿಯುತ್ತಾರೆ? ಎನ್ನೋ ಬಗ್ಗೆ ಮಾಹಿತಿ ಇರಲಿಲ್ಲ. ಅದರಲ್ಲೂ ದರ್ಶನ್ಗೆ ಸಿಗರೇಟನ್ನು ಸೇದುವ ಹವ್ಯಾಸ ಕೂಡ ಇತ್ತು.
ದರ್ಶನ್ ಒಂದು ದಿನಕ್ಕೆ ಬರೋಬ್ಬರಿ ಒಂದು ಫುಲ್ ಬಾಟಲ್ ಎಣ್ಣೆ ಕುಡಿಯುತ್ತಿದ್ದರಂತೆ. ಹಾಗೇ ಪ್ರತಿದಿನ ಹತ್ತಾರು ಸಿಗರೇಟು ಸೇದುತ್ತಿದ್ದರಂತೆ ನಟ ದರ್ಶನ್ ಅವರು. ಆದರೆ ಈ ಬಗ್ಗೆ ಯಾವುದೇ ಅಧಿಕೃತ & ಸೂಕ್ತ ಮಾಹಿತಿ ಇಲ್ಲ. ಆದರೂ ಈ ಬಗ್ಗೆ ದರ್ಶನ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇದು ಅಂತೆ ಕಂತೆ ಮಾಹಿತಿಯಾಗಿದೆ.
ನಿರ್ಮಾಪಕ ಉಮಾಪತಿ ಖಾಸಗಿವಾಹಿನಿ ಸಂದರ್ಶನದಲ್ಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಇವೆಂಟ್ ನಡೆಯುತ್ತದೆ. ಹೈದರಾಬಾದ್ ಮೂಲದ ಕಂಪನಿ ಜೊತೆ ಟೈಯಪ್ ಆಗುತ್ತೆ. ಅವತ್ತು ಕುಡಿದಿದ್ದ ಬಿಲ್ 8-9 ಲಕ್ಷ ಕಟ್ಟುತ್ತೇವೆ. ಆದ್ರೂ ಕೂಡ ನನಗೂ ಅವರಿಗೆ ಎಣ್ಣೆ ಕಡಿಮೆ ಆಯ್ತು ಅಂತ ಗಲಾಟೆ ಆಗುತ್ತದೆ. ಅವತ್ತು ಅನಿಸುತ್ತೆ ನನಗೆ ಯಾಕಯ್ಯ ಬೇಕಾಗಿತ್ತು. ರಾಜನಂಗೆ ಇದ್ದೆ ಸಿನಿಮಾ ಮಾಡಿಬಿಟ್ಟು ಎಣ್ಣೆ ಸಪ್ಲೆಯರ್ ಆಗ್ಬಿಟ್ಟೆ ಎಂದು ದೊಡ್ಡ ಗಲಾಟೆ ನಡೆಯುತ್ತದೆ. ಅವತ್ತು ಹರಿಕೃಷ್ಣ ಸರ್ ಇಬ್ಬರಿಗೂ ಸಮಾಧಾನ ಮಾಡುತ್ತಾರೆ ಎಂದು ಹಳೆಯ ಘಟನೆಯನ್ನು ನಿರ್ಮಾಪಕ ಉಮಾಪತಿ ಗೌಡ ನೆನಪಿಸಿಕೊಂಡಿದ್ದರು.
ಏನಿದು ಪ್ರಕರಣ? ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.