ಸನ್‌ರೈಸರ್ಸ್‌ ಹೈದರಾಬಾದ್ ಮುಖ್ಯ ಕೋಚ್ ಆಗಿ ಆರ್‌ಸಿಬಿಯ ಮಾಜಿ ನಾಯಕ ನೇಮಕ

dvv
Published on

ಹೈದರಾಬಾದ್: ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮುಂದಿನ ವರ್ಷದ ಐಪಿಎಲ್ 17ನೇ ಆವೃತ್ತಿಗೆ ನ್ಯೂಜಿಲೆಂಡ್‌ನ ದಿಗ್ಗಜ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಅವರನ್ನು ನೂತನ ಮುಖ್ಯ ಕೋಚ್ ಆಗಿ ಸೋಮವಾರ ನೇಮಿಸಿದೆ. ಇದರೊಂದಿಗೆ ಬ್ರಿಯಾನ್ ಲಾರಾ ಅವರೊಂದಿಗಿನ 2 ವರ್ಷಗಳ ಒಪ್ಪಂದಕ್ಕೆ ಅಂತ್ಯ ಹಾಡಿದೆ. 44 ವರ್ಷದ ವೆಟ್ಟೋರಿ ಈ ಹಿಂದೆ 2014ರಿಂದ 2018ರವರೆಗೆ ಆರ್‌ಸಿಬಿ ತಂಡದ ತರಬೇತುದಾರರಾಗಿದ್ದರು.

ಕಿವೀಸ್ ಮಾಜಿ ನಾಯಕ ವೆಟ್ಟೋರಿ ಪ್ರಸ್ತುತ ಹಂಡ್ರೆಡ್ ಲೀಗ್‌ನಲ್ಲಿ ಬರ್ಮಿಗ್‌ಹ್ಯಾಂ ಫಿನಿಕ್ಸ್ ತಂಡದ ಕೋಚ್ ಆಗಿದ್ದಾರೆ. ಕಳೆದ ಆರು ವರ್ಷಗಳಲ್ಲಿ ವೆಟ್ಟೋರಿ ಸನ್‌ರೈಸರ್ಸ್‌ ತಂಡದ ಐದನೇ ಕೋಚ್ ಎನಿಸಿದ್ದಾರೆ. 2020ರಲ್ಲಿ ಕೊನೆಯದಾಗಿ ಪ್ಲೇಆ್ ಪ್ರವೇಶಿಸಿರುವ ಸನ್‌ರೈಸರ್ಸ್‌ ತಂಡ 2023ರ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದುಕೊಂಡಿತ್ತು. ಇತ್ತೀಚಿನ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಹಾಗೂ ಬಾಂಗ್ಲಾದೇಶದ ಸ್ಪಿನ್ ಸಲಹೆಗಾರ ಆಗಿ ವೆಟ್ಟೋರಿ ಕರ್ತವ್ಯ ನಿರ್ವಹಿಸಿದ್ದರು.

ಲಾರಾ ಅವರೊಂದಿಗಿನ ನಮ್ಮ ಎರಡು ವರ್ಷಗಳ ಒಡನಾಟವು ಕೊನೆಗೊಂಡಿದ್ದು, ಅವರಿಗೆ ವಿದಾಯ ಹೇಳುತ್ತೇವೆ. ಸನ್‌ರೈಸರ್ಸ್‌ಗೆ ನೀಡಿದ ಕೊಡುಗೆಗಾಗಿ ಧನ್ಯವಾದಗಳು ಎಂದು ಬ್ರಿಯಾನ್ ಲಾರಾ ಅವರಿಗೆ ್ರಾಂಚೈಸಿ ಶುಭ ಹಾರೈಸಿದೆ. 2023ರ ಐಪಿಎಲ್ ಮೊದಲು ಟಾಮ್ ಮೂಡಿ ಅವರಿಂದ ಮುಖ್ಯ ತರಬೇತುದಾರರಾಗಿ ಲಾರಾ ಅಧಿಕಾರ ವಹಿಸಿಕೊಂಡಿದ್ದರು.

ಆರ್‌ಸಿಬಿ ತಂಡದ ಕೋಚ್ ಆಗುವ ಮುನ್ನ ನಾಯಕನಾಗಿ ಕಾಣಿಸಿಕೊಂಡಿದ್ದ ಡೇನಿಯಲ್ ವೆಟ್ಟೋರಿ 2011ರಲ್ಲಿ ತಂಡವನ್ನು ೈನಲ್‌ನಲ್ಲಿ ಮುನ್ನಡೆಸಿದ್ದರು. ಇದರೊಂದಿಗೆ ಆರ್‌ಸಿಬಿ ತಂಡ 2ನೇ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಕಾಣಿಸಿಕೊಂಡಿತ್ತು. 2014ರಲ್ಲಿ ನಾಯಕತ್ವ ತ್ಯಜಿಸಿದ ವೆಟ್ಟೋರಿ ಬಳಿಕ ಕೋಚ್ ಆಗಿ ನೇಮಕವಾದರು. ಮೊದಲ ವರ್ಷದಲ್ಲಿ ಇವರ ಮಾರ್ಗದರ್ಶನದಲ್ಲಿ ಆರ್‌ಸಿಬಿ 5 ಗೆಲುವು, 9 ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ನಂತರ 2016ರಲ್ಲಿ ಮೂರನೇ ಬಾರಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡ ೈನಲ್‌ಗೇರಿದರು, ಸನ್‌ರೈಸರ್ಸ್‌ ಹೈದರಾಬಾದ್ ಎದುರು ನಿರಾಸೆ ಅನುಭವಿಸಿತು. ಬಳಿಕ 2017 ಹಾಗೂ 2018 ರಲ್ಲಿ ಕ್ರಮವಾಗಿ 8 ಮತ್ತು 6ನೇ ಸ್ಥಾನ ಪಡೆದಾಗ ಆರ್‌ಸಿಬಿ ್ರಾಂಚೈಸಿ ಕಿವೀಸ್ ಆಟಗಾರನಿಗೆ ಕೊಕೊ ನೀಡಿ, 2019ರಲ್ಲಿ ಗ್ಯಾರಿ ಕಸ್ಟರ್ನ್ ಅವರನ್ನು ನೂತನ ಕೋಚ್ ಆಗಿ ಆಯ್ಕೆ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net