ವಿಜಯನಗರ ಬಡಾವಣೆಯಲ್ಲಿ ಹದಗೆಟ್ಟ ರಸ್ತೆ ಗೋಳು

web 3
Published on

ಧಾರವಾಡ: ನಗರದ ಮಂಗಳಗಟ್ಟಿ ಪ್ಲಾಟ್ ಹಿಂಭಾಗದಲ್ಲಿರುವ ವಿಜಯನಗರ ಬಡಾವಣೆಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ನಿವಾಸಿಗಳ ಗೋಳು ಕೇಳುವವರಿಲ್ಲದಂತಾಗಿದೆ.
ವಿಜಯನಗರ ಬಡಾವಣೆ ೨೦೧೨- ೧೩ರಲ್ಲಿ ಎನ್‌ಎ ಆಗಿದ್ದು, ಈವರೆಗೆ ಬೀದಿದೀಪದ ವ್ಯವಸ್ಥೆ ಮಾಡಿಲ್ಲ. ಪಾಲಿಕೆಯವರನ್ನು ಕೇಳಿದರೆ ಸ್ಪಂದನೆ ಸಿಗುತ್ತಿಲ್ಲ. ಒಳಚರಂಡಿ ವ್ಯವಸ್ಥೆಗಾಗಿ ರಸ್ತೆ ಮಧ್ಯೆ ಅಗೆಯಲಾಗಿದೆ. ಒಳಚರಂಡಿ ಚೆಂಬರ್ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಪಕ್ಕದ ಕಾಳೆ ಪ್ಲಾಟ್‌ನಲ್ಲಿ ರಸ್ತೆ, ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು ಎಂದು ವಿಜಯನಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂ.ಎಸ್. ಭೂಮನಗೌಡರ, ಪದಾಽಕಾರಿಗಳಾದ ಕೆ.ಎಂ. ಕಲಾದಗಿ, ಶ್ರೀನಾಥ ದೊಂಡಪ್ಪನವರ, ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net