40ನೇ ವಯಸ್ಸಿಗೆ 2ನೇ ಮದುವೆಯಾದ ಕಿರುತೆರೆ ನಟಿ!

Dalljiet Kaur
Published on

ಮುಂಬೈ: ಹಿಂದಿ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ, ಕಿರುತೆರೆಯ ನಟಿ ದಲ್ಜೀತ್ ಕೌರ್ 40ನೇ ವಯಸ್ಸಿಗೆ ಎರಡನೇ ಮದುವೆಯಾಗಿದ್ದಾರೆ.

ಈ ಹಿಂದೆ ನಟಿ ದಲ್ಜೀತ್ ಕೌರ್ ಹಿಂದಿ ನಟ ಶಾಲಿನ್ ಭಾನೋಟ್ ಜೊತೆ 2019ರಲ್ಲಿ ಹಸೆಮಣೆ ಏರಿದ್ದರು. ನಂತರ ಈ ಜೋಡಿ ಡಿವೋರ್ಸ್ ಪಡೆದು ದೂರಾವಾದರು. ಇದೀಗ ಉದ್ಯಮಿ ನಿಖಿಲ್ ಪಟೇಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿಖಿಲ್ ಪಟೇಲ್ ಮತ್ತು ದಲ್ಜೀತ್ ಕೌರ್ ಇಬ್ಬರಿಗೂ ಇದು 2ನೇ ಮದುವೆಯಾಗಿದ್ದು,ನಿಖಿಲ್‌ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಲ್ಜೀತ್ ಕೌರ್‌ಗೆ ಈಗಾಗಲೇ ಒಬ್ಬ ಮಗನಿದ್ದು, ಪೋಷಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಗುರುಹಿರಿಯರ ಸಮ್ಮುಖದಲ್ಲಿ ಇಂದು ಈ ಜೋಡಿ ಮದುವೆಯಾಗಿದ್ದಾರೆ. ಸದ್ಯ ಹಳದಿ ಶಾಸ್ತ್ರ, ಮತ್ತು ವಿವಾಹದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net