More

    ವಾಹನ ತಡೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದ ದಲಿತ ಸಂಘಟನೆ ಕಾರ್ಯಕರ್ತರು!

    ಬಾಗಲಕೋಟೆ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮುಧೋಳ ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ದಲಿತ ಸಂಘಟನೆಗಳ ಪ್ರತಿಭಟನೆಯ ಬಿಸಿಯನ್ನು ಎದುರಿಸುವಂತಾಯಿತು.

    ಮುಧೋಳ-ಬಾಗಲಕೋಟೆಗೆ ತೆರಳುವ ರಸ್ತೆ ಮಧ್ಯೆ ವಾಹನ ತಡೆದು ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಡಿಕೆಶಿ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ಮಾದಿಗ ಮಹಾಸಭಾದ ಕಾರ್ಯಕರ್ತರು ಈ ಪ್ರತಿಭಟನೆ ನಡೆಸಿದ್ದು, ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ದ್ವಂದ್ವ ನಿಲುವು ತಳೆದಿದ್ದಾರೆಂದು ಆರೋಪಿಸಿದರು.

    ಕಾರ್ಯಕರ್ತರು ತಡೆದಿದ್ದರಿಂದ ಡಿ.ಕೆ.ಶಿವಕುಮಾರ್ ತಾವು ಚಲಿಸುತ್ತಿದ್ದ ಕಾರು ನಿಲ್ಲಿಸಿ ಅಹವಾಲು ಆಲಿಸಿದರು. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿದ ಕಾರ್ಯಕರ್ತರು ಈ ವೇಳೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಒಂದೇ ವರ್ಗವನ್ನು ಓಲೈಕೆ ಮಾಡುತ್ತಿದ್ದೀರಿ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸದಾಶಿವ ಆಯೋಗ ಜಾರಿಗೆ ತರಲು ಮೊದಲು ಹೇಳಿದ್ದೇ ನಾವು ಎಂದು ಡಿಕೆಶಿ ಸಮಜಾಯಿಷಿ ನೀಡಿದರು. ಎಲ್ಲ ಜಾತಿಯ ಹಾಗೂ ವರ್ಗದ ಜನರನ್ನ ಓಲೈಸುವ ಕೆಲಸ ನಾವು ಮಾಡುತ್ತೇವೆ ಎಂದು ಡಿಕೆಶಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಪ್ರತಿಭಟನಾಕಾರರು ಡಿಕೆಶಿ ವಿರುದ್ಧ ಘೋಷಣೆ ಕೂಗುತ್ತಿದ್ದಾಗ, ಡಿಕೆಶಿಗೆ ಜೈ ಎನ್ನಿ ಎಂದು ಯುವ ಕಾಂಗ್ರೆಸ್​ ಅಧ್ಯಕ್ಷ ಮಹಮದ್​ ನಲಪಾಡ್ ಮನವಿ ಮಾಡಿಕೊಂಡರು.

    ಸಂಗೀತ ನಿರ್ದೇಶಕ ಡಾ.ಕಿರಣ್​ ತೋಟಂಬೈಲ್​ ಮೇಲೆ ರಾಡ್​ನಿಂದ ಹಲ್ಲೆ, ತಲೆಗೆ ಗಾಯ

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

    ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಆರ್‌ಟಿಐ ಕಾರ್ಯಕರ್ತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts