

ನವದೆಹಲಿ: ಬೌದ್ಧ ಧರ್ಮದ ಜಗದ್ಗುರು ದಲೈ ಲಾಮಾ ಬಾಲಕನ ತುಟಿಗೆ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಧರ್ಮಗುರುವಿನ ವಿವಾದಗಳು ಇದೇ ಮೊದಲಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದಲೈ ಲಾಮಾ ಬಾಲಕನಿಗೆ ಚುಂಬಿಸುತ್ತಿರುವುದು ಕಂಡು ಬರುತ್ತದೆ.
ಬಳಿಕ ತಮ್ಮ ನಾಲಿಗೆಯನ್ನು ಹೊರಹಾಕಿ ಅದನ್ನು ಚೀಪುವಂತೆ ಬಾಲಕನಿಗೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ. ನನ್ನ ನಾಲಿಗೆಯನ್ನು ಚೀಪಲು ಸಾಧ್ಯವೇ ಎಂದು ಬಾಲಕನಿಗೆ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
2019ರಲ್ಲಿ BBCಗೆ ನೀಡಿದ್ದ ಸಂದರ್ಶನದಲ್ಲಿ ದಲೈಲಾಮಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ತಮ್ಮ ಉತ್ತರಾಧಿಕಾರಿ ಒಬ್ಬ ಸುಂದರವಾದ ಮಹಿಳೆಯಾಗಿರಬೇಕು ಮಹಿಳಾ ದಲೈ ಲಾಮಾ ಹೆಚ್ಚು ಆಕರ್ಷಿನಿಯವಾಗಿರಬೇಕು ಎಂದು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು.
ಸಂದರ್ಶನದ ವಿಡಿಯೋ ವೈರಲ್ ಆಗಿ ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ದಲೈಲಾಮಾ ಕ್ಷಮೆಯಾಚಿಸಿದ್ದರು.