ನಿತ್ಯ ಭವಿಷ್ಯ| ಈ ರಾಶಿಯವರಿಂದು ಅತಿ ವೇಗದ ವಾಹನ ಚಲಾಯಿಸದಿರಿ

NITYA BHAVISHYA
Published on

ಮೇಷ: ಕೇವಲ ಹಗಲುಗನಸು ಕಾಣುತ್ತ ಕಾಲಹರಣ ಮಾಡುತ್ತಿದ್ದೀರಿ. ಅದನ್ನು ಕೈಬಿಟ್ಟು ಪರಿಶ್ರಮ ವಹಿಸಿದರೆ ಲಾಭ ಒದಗಲಿದೆ. ಶುಭಸಂಖ್ಯೆ: 8

ವೃಷಭ: ಎಂದಿನಂತೆ ಇಂದು ಕೂಡ ಎಲ್ಲ ಸರಿಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಹಿತಶತ್ರುಗಳಿಂದ ತೊಂದರೆಯಾದೀತು. ಎಚ್ಚರ. ಶುಭಸಂಖ್ಯೆ: 4

ಮಿಥುನ: ಮನಸ್ಸಿಗೆ ಬಂದಂತೆ ಖರ್ಚುಗಳನ್ನು ಮಾಡದಿರಿ. ದಿನದ ಕೊನೆಯ ವೇಳೆಗೆ ಅಗತ್ಯದ ಅನಿರೀಕ್ಷಿತ ಖರ್ಚಿನ ವಿವರ ತಿಳಿದುಬರಲಿದೆ. ಶುಭಸಂಖ್ಯೆ: 1

ಕಟಕ: ನಿಮಗೆ ತಲೆನೋವಾಗಿ ಪರಿಣಮಿಸಿದ್ದಂತಹ ಭೂಸಂಬಂಧಿ ವಿಚಾರವೊಂದರಲ್ಲಿ ಆಕಸ್ಮಿಕವಾಗಿ ನಿರಾಳತೆಯು ಲಭ್ಯವಾಗಲಿದೆ. ಶುಭಸಂಖ್ಯೆ: 9

ಸಿಂಹ: ಅತಿಯಾದ ವೇಗದಿಂದ ಅಥವಾ ನಿರ್ಲಕ್ಷ್ಯನ್ನು ತೋರುತ್ತ ವಾಹನ ಚಲಾಯಿಸದಿರಿ. ಅಪಘಾತ ಆಗದಂತೆ ಜಾಗರೂಕತೆ ಇರಲಿ. ಶುಭಸಂಖ್ಯೆ: 6

ಕನ್ಯಾ: ಸಹೋದ್ಯೋಗಿಗಳೆಲ್ಲ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆಂಬ ಯೋಚನೆಯನ್ನು ಬಿಡಿ. ಮಾನಸಿಕ ನೆಮ್ಮದಿ ಗಳಿಸುವಿರಿ. ಶುಭಸಂಖ್ಯೆ: 3

ತುಲಾ: ಗುತ್ತಿಗೆದಾರರು, ಒಳಾಂಗಣ ವಿನ್ಯಾಸಕಾರರು, ವಜ್ರದ ವ್ಯಾಪಾರಿಗಳಿಗೆ ತುಸು ಆರ್ಥಿಕ ಸಂಕಷ್ಟ ಎದುರಾಗಬಹುದು. ಎಚ್ಚರ. ಶುಭಸಂಖ್ಯೆ: 7

ವೃಶ್ಚಿಕ: ಯಾರದೋ ಹಸ್ತಕ್ಷೇಪದಿಂದ ಸರ್ಕಾರಿ ಕಾರ್ಯದಲ್ಲಿ ತೊಂದರೆಗಳು ಬರಬಹುದು. ಯಾರ ಬಳಿಯೂ ಗುಟ್ಟುಗಳನ್ನು ಬಿಟ್ಟುಕೊಡದಿರಿ. ಶುಭಸಂಖ್ಯೆ: 5

ಧನುಸ್ಸು: ನಿಮ್ಮನ್ನು ಕೇವಲ ಒತ್ತಡದಲ್ಲಿ ಇರಿಸುವಂತಹ ತಂತ್ರದ ಬಗ್ಗೆ ಜಾಗ್ರತೆ ಇರಲಿ. ಸಂದರ್ಭವನ್ನು ಜಾಣ್ಮೆಯಿಂದ ನಿಭಾಯಿಸಿ. ಶುಭಸಂಖ್ಯೆ: 2

ಮಕರ: ಹಳೆಯ ಕೆಲವು ಕಾಗದಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಯೇ ವಿಲೇವಾರಿ ಮಾಡಿ. ನಂತರ ದುಃಖಪಡುವುದೇನೂ ಬೇಡ. ಶುಭಸಂಖ್ಯೆ: 4

ಕುಂಭ: ಅನಿರೀಕ್ಷಿತ ವಲಯದಿಂದ ನಿಮ್ಮ ಮುಂದಿನ ಯೋಜನೆಗಳ ಸಫಲತೆಗೆ ಸಹಾಯ ಸಹಕಾರ ಲಭಿಸಿ ಸಂತಸಕ್ಕೆ ದಾರಿ ಸಿಗಲಿದೆ. ಶುಭಸಂಖ್ಯೆ: 8

ಮೀನ: ಬ್ಯಾಂಕ್, ಸೂಪರ್ ಮಾರ್ಕೆಟ್ ಮುಂತಾದ ಕಡೆ ಖರೀದಿಗೆಂದು ಹೋದಾಗ ಕ್ರೆಡಿಟ್ ಕಾರ್ಡ್ ಬಗ್ಗೆ ವಿಶೇಷ ನಿಗಾ ಇದ್ದೇ ಇರಲಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net