ನಿತ್ಯಭವಿಷ್ಯ| ಈ ರಾಶಿಯವರಿಗೆ ಮಾತಿನ ಸಾಮರ್ಥ್ಯವೇ ದಿವ್ಯೌಷಧ..

Nitya-Bhavishya-vvani-1-2-1-1
Published on

ಮೇಷ: ಜೀವನದಲ್ಲಿ ಕಷ್ಟಕೋಟಲೆಗಳು ತುಂಬಿರುವುದು ನಿಜ. ಆದರೂ ಕೂಡ ನಗುನಗುತ್ತಲೇ ಇದ್ದರೆ ಸಜ್ಜನರಿಂದ ನೆರವು ಲಭ್ಯ. ಶುಭಸಂಖ್ಯೆ: 5

ವೃಷಭ: ಹೊಸ ಕೆಲಸದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿ. ಅದೆ ಜೊತೆಗೆ ತಾಳ್ಮೆಯು ನಿಮ್ಮ ಬಹು ಮುಖ್ಯ ಅಸ್ತ್ರವಾಗಲಿ. ಶುಭಸಂಖ್ಯೆ: 6

ಮಿಥುನ: ಹೊಸ ಉದ್ಯಮವು ಬೇಗನೆ ಕೈಹಿಡಿಯಲಿದೆ. ಆದರೆ ದೊಡ್ಡ ಬಂಡವಾಳ ಹಾಕುವಂತಹ ಆತುರವನ್ನು ತೋರಿಸಬೇಡಿ. ಶುಭಸಂಖ್ಯೆ: 9

ಕಟಕ: ಹಿತ್ತಲ ಗಿಡ ಮದ್ದಲ್ಲ ಎಂಬ ಸಂಕುಚಿತವಾದ ಮನೋಭಾವವನ್ನು ಕೈಬಿಡಿ. ಸಂಗಾತಿಯಿಂದ ಹೆಚ್ಚಿನ ಬೆಂಬಲ ಸಿಗಲಿದೆ. ಶುಭಸಂಖ್ಯೆ: 4

ಸಿಂಹ: ನಿಮಗೆ ನೀವೇ ಗುರುವಾಗಬೇಕಾಗಿರುವುದು ಸದ್ಯದ ತುರ್ತ. ಅದರಿಂದಾಗಿ ವಿದ್ಯೆ, ವಿನಯವನ್ನು ಗಳಿಸುವಿರಿ. ಶುಭಸಂಖ್ಯೆ: 2

ಕನ್ಯಾ: ಯಾರಿಂದಲೂ ಯಾವುದರಿಂದಲೂ ಉಪಯೋಗವಿಲ್ಲ ಎಂಬ ಹತಾಶೆ ಬೇಡ. ಆಸೆ ಇರಲಿ. ವಿಜಯ ಲಭಿಸುತ್ತದೆ. ಶುಭಸಂಖ್ಯೆ: 8

ತುಲಾ: ಧಾರಾಳವಾಗಿ ಉಪದೇಶ ಕೊಡುವಂತಹ ಅಪ್ರಯೋಜಕ ಜನರನ್ನು ಅಲಕ್ಷಿಸಿಬಿಡಿ. ಆದರೆ ಅವರ ಬಗ್ಗೆ ಕೋಪಿಸಿಕೊಳ್ಳದಿರಿ. ಶುಭಸಂಖ್ಯೆ: 7

ವೃಶ್ಚಿಕ: ಹಳೆಯ ಕಾಗದಪತ್ರಗಳನ್ನೆಲ್ಲ ಶಿಸ್ತಿನಿಂದ ಜೋಡಿಸಿ. ಇದು ಆಸ್ತಿಯ ವಿಷಯದಲ್ಲಿ ಅತ್ಯಗತ್ಯವಾಗಿ ಬೇಕಾಗಲಿದೆ. ಶುಭಸಂಖ್ಯೆ: 1

ಧನಸ್ಸು: ತಾಯಿ ಶಾರದಾಂಬೆಯನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸಿ. ಕತ್ತಲಿನಲ್ಲೂ ಬೆಳಕಿನ ಕಿರಣಗಳು ಬೇಗನೆ ಗೋಚರವಾಗಲಿವೆ. ಶುಭಸಂಖ್ಯೆ: 3

ಮಕರ: ಹಿರಿಯರು ಹಳೆಯ ತಲೆಮಾರಿನವರಾದರೂ ಅವರನ್ನು ಗೌರವದಿಂದ ನೋಡಿ. ಅವರಿಂದಲೇ ನಿಮಗೆ ಶ್ರೀರಕ್ಷೆ ದೊರೆಯಲಿದೆ. ಶುಭಸಂಖ್ಯೆ: 5

ಕುಂಭ:  ತಳಮಟ್ಟದಿಂದ ಎತ್ತರಕ್ಕೆ ಬೆಳೆಯುವಂತಹ ಮನಸ್ಸು ಮಾಡಿ. ಹೊಸ ಸುಖ ಸಮೃದ್ಧಿಗಳಿಗೆ ದಾರಿ ಒದಗಲು ಸಾಧ್ಯವಿದೆ. ಶುಭಸಂಖ್ಯೆ: 6

ಮೀನ : ಮಾತಿನ ಸಾಮರ್ಥ್ಯವೇ ದಿವ್ಯೌಷಧದಂತೆ ರಕ್ಷಿಸುವುದಕ್ಕೆ ಬರುವ ವಿಶೇಷ ಸಂದರ್ಭವು ನಿಮಗಿಂದು ಸೃಷ್ಟಿಯಾಗಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net