More

    ನಿಮಗೆ ನಿಮ್ಮವರಿಂದಲೇ ತೊಂದರೆಯಾದೀತು; ನಿತ್ಯ ಭವಿಷ್ಯ

    ಮೇಷ: ಮನೆಯ ಹಿರಿಯರೊಡನೆ ರ್ಚಚಿಸದೆಯೇ ಥಟ್ಟನೆ ಹೊಸ ವಿಚಾರವೊಂದನ್ನು ಜಾರಿಗೆ ತರುವುದಕ್ಕೆ ಮುಂದಾಗದಿರಿ. ಶುಭಸಂಖ್ಯೆ: 8

    ವೃಷಭ: ನಿಮ್ಮವರಿಂದಲೇ ನಿಮಗೆ ತೊಂದರೆಯಾದೀತು. ಅವರೆಲ್ಲರನ್ನೂ ಬಹಳ ಚಾತುರ್ಯದಿಂದಲೇ ನಿಭಾಯಿಸಿದರೆ ಕ್ಷೇಮವಿದೆ. ಶುಭಸಂಖ್ಯೆ: 4

    ಮಿಥುನ: ಸರ್ರನೆ ಮುಂದುವರಿಯುವಂಥ ಸ್ವಭಾವವನ್ನು ಬಿಟ್ಟುಬಿಡಿ. ಪೂರ್ವಸಿದ್ಧತೆ ಮಾಡಿಕೊಂಡರೆ ವಿಶೇಷ ಪ್ರಗತಿ ದೊರೆಯಲಿದೆ. ಶುಭಸಂಖ್ಯೆ: 2

    ಕಟಕ: ಧೈರ್ಯದ ಹೆಜ್ಜೆಗಳು ಫಲವನ್ನು ಕೊಡುತ್ತವೆ ಎಂದಾದರೂ ಅವಸರವಿಲ್ಲದ ನಡೆಗಳಿಂದಲೇ ಪ್ರಶಂಸೆಯನ್ನು ಗಳಿಸುವಿರಿ. ಶುಭಸಂಖ್ಯೆ: 8

    ಸಿಂಹ: ಸಮುದ್ರದ ಅಲೆಗಳಂತೆ ಕಷ್ಟಗಳು ಎದ್ದೆದ್ದು ಆಕ್ರಮಣ ಮಾಡುತ್ತಿವೆ ಎಂದು ಭಯಪಡದಿರಿ. ಮುನ್ನುಗ್ಗಿ ನಡೆದರೆ ಗೆಲುವಿದೆ. ಶುಭಸಂಖ್ಯೆ: 1

    ಕನ್ಯಾ: ಅನಗತ್ಯ ಮಾತುಗಳನ್ನು ನಿಯಂತ್ರಿಸಿದರೆ ಕೆಲಸಗಳು ಸುಸೂತ್ರವಾಗಿ ನಡೆಯುವಂಥ ಪವಾಡವನ್ನು ಕಾಣಲಿದ್ದೀರಿ. ಶುಭಸಂಖ್ಯೆ: 5

    ತುಲಾ: ನಿಷ್ಠೆಯನ್ನು ಹೊಂದಿರುವಂತಹ ಜನರುಳ್ಳ ಸಂಘಟನೆಯನ್ನು ಕಟ್ಟುವುದರಲ್ಲಿ ತಪ್ಪಿಲ್ಲ. ಆದರೆ ನ್ಯಾಯಮಾರ್ಗವನ್ನು ಬಿಡದಿರಿ. ಶುಭಸಂಖ್ಯೆ: 7

    ವೃಶ್ಚಿಕ: ನಿಮ್ಮನ್ನು ತೀವ್ರವಾಗಿ ವಿರೋಧಿಸುವ ಅಥವಾ ಮೆಚ್ಚುವವರ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ನೈಜ ನಾಯಕತ್ವದ ಅವಕಾಶ ಲಭ್ಯ. ಶುಭಸಂಖ್ಯೆ: 3

    ಧನುಸ್ಸು: ಹಳೆಯ ತಪ್ಪುಗಳನ್ನು ಮರೆಯುವ ಸ್ವಭಾವವನ್ನು ಬಿಟ್ಟುಬಿಡಿ. ತಪ್ಪಿನ ಅರಿವಿನಿಂದ ಸುಧಾರಣೆಯ ದಾರಿಯೊಂದು ಬೇಗ ಸಿಗಲಿದೆ. ಶುಭಸಂಖ್ಯೆ: 9

    ಮಕರ: ಉತ್ತಮ ಸಂಘಟಕರಾಗಿದ್ದೀರಿ. ಸಹಯೋಗದಲ್ಲಿ ನಡೆಸುವಂತಹ ಕಾರ್ಯಕ್ರಮಗಳು ಪ್ರಖ್ಯಾತಿ ಹಾಗೂ ಮನ್ನಣೆ ತರಲಿವೆ. ಶುಭಸಂಖ್ಯೆ: 4

    ಕುಂಭ: ಮನೆಯಲ್ಲಿ ಹೊಂದಾಣಿಕೆಯೇ ನೆಮ್ಮದಿಯ ಮೂಲಮಂತ್ರ ಎಂಬ ಅರಿವು ಸಂಜೀವಿನಿಯಾಗಿ ಬದಲಾಗಿ ನಿಮ್ಮನ್ನು ಗೆಲ್ಲಿಸಲಿದೆ. ಶುಭಸಂಖ್ಯೆ: 6

    ಮೀನ: ಅಜೀರ್ಣ, ತಲೆಸುತ್ತುಗಳಂತಹ ತೊಂದರೆಗಳು ಬರಬಹುದು. ಕೂಡಲೇ ವೈದ್ಯರ ಭೇಟಿ ಮಾಡಿ. ಆಹಾರದ ಬಗ್ಗೆ ಜಾಗ್ರತೆ ವಹಿಸಿ. ಶುಭಸಂಖ್ಯೆ: 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts