ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಸೋಲಿಸಲೆಂದೇ ಜನ ಸುತ್ತುವರಿಯಲಿದ್ದಾರೆ..

nity
Published on

ಮೇಷ: ಹಿಂದಿನ ಕಹಿ ಅನುಭವಗಳ ನೆನಪಿನಲ್ಲಿಯೇ ಇದ್ದೀರಿ. ಅದನ್ನು ಮರೆತು ಕ್ರಿಯಾಶೀಲರಾದರೆ ಸದ್ಯವೇ ಎಲ್ಲ ಒಳಿತಾಗಲಿದೆ. ಶುಭಸಂಖ್ಯೆ: 4

ವೃಷಭ: ಮನೆಯ ಸದಸ್ಯರೊಂದಿಗೆ ಅನಿರೀಕ್ಷಿತವಾದ ಸಂಘರ್ಷಗಳು ಏಳುವ ಸಾಧ್ಯತೆಗಳಿವೆ. ಈ ವೇಳೆ ಮೌನವಾಗಿ ಇದ್ದಷ್ಟೂ ಉತ್ತಮ. ಶುಭಸಂಖ್ಯೆ: 8

ಮಿಥುನ: ಅಸಹಾಯಕತೆ ಕಾಡಬಹುದು. ಅದನ್ನು ಬಿಟ್ಟು ಛಲದಿಂದ ಮುನ್ನುಗ್ಗಿದರೆ ವಿಶಿಷ್ಟವಾದುದನ್ನೇ ಗಳಿಸುವಿರಿ. ಗುರುವನ್ನು ಸ್ತುತಿಸಿ. ಶುಭಸಂಖ್ಯೆ: 1

ಕಟಕ: ನಂಜುಂಡೇಶ್ವರನ ಅಭಯದಿಂದ ವಿಶೇಷವಾದ ಶಕ್ತಿಯನ್ನೇ ಸಂಚಯನ ಮಾಡಿಕೊಳ್ಳಲಿದ್ದೀರಿ. ವಿಳಂಬ ನೀತಿ ಅನುಸರಿಸದಿರಿ. ಶುಭಸಂಖ್ಯೆ: 6

ಸಿಂಹ: ಹಿರಿಯರನ್ನು ಗೌರವದಿಂದಲೇ ಕಾಣುವಂತಹ ನಿಮ್ಮ ಬಗ್ಗೆ ಹಿತಶತ್ರುಗಳು ದ್ವೇಷಭಾವನೆಯನ್ನು ಬಿತ್ತಬಹುದು. ಎಚ್ಚರದಿಂದಿರಿ. ಶುಭಸಂಖ್ಯೆ: 2

ಕನ್ಯಾ: ಜೂಜು, ರೇಸ್​ನಂತಹ ಅದೃಷ್ಟದ ಆಟಗಳಲ್ಲಿ ಹಣವನ್ನು ತೊಡಗಿಸಲು ಹೋಗದಿರಿ. ಆರ್ಥಿಕ ನಷ್ಟಕ್ಕೆ ಕದ ತೆರೆದಂತಾಗುತ್ತದೆ. ಶುಭಸಂಖ್ಯೆ: 9

ತುಲಾ: ಎಲ್ಲ ಬಗೆಯ ಭೂಸಂಬಂಧಿ ಗೊಂದಲಗಳಿಂದ ಹೊರಬಂದು ನಿರಾಳರಾಗುವ ಸಾಧ್ಯತೆ ಇದೆ. ಭಕ್ತಿಯಿಂದ ಶಿವನನ್ನು ಸ್ತುತಿಸಿ. ಶುಭಸಂಖ್ಯೆ: 5

ವೃಶ್ಚಿಕ: ಪ್ರತ್ಯೇಕ ಬಗೆಯ ಸಾಧನೆಯನ್ನು ಸೃಷ್ಟಿಸಿಕೊಳ್ಳುವ ನಿಮ್ಮ ಗಾಢವಾದ ಪ್ರಯತ್ನಗಳಿಗೆ ಧೂರ್ತ ಜನ ತಡೆಯೊಡ್ಡಬಹುದು. ಜಾಗ್ರತೆ. ಶುಭಸಂಖ್ಯೆ: 3

ಧನಸ್ಸು: ಸೋಲಿಸಲೇಬೇಕು ಎಂದು ನಿರ್ಧರಿಸಿಕೊಂಡು ಸುತ್ತುವರಿಯುವಂತಹ ಜನರಿದ್ದಾರೆ. ಅವರಿಂದ ದೂರವಿದ್ದರೆ ನಿಮಗೇ ಕ್ಷೇಮ. ಶುಭಸಂಖ್ಯೆ: 7

ಮಕರ: ಔದ್ಯಮಿಕ ರಂಗದ ಪಾಲುದಾರರು ನಿಮ್ಮನ್ನು ನಿರ್ಲಕ್ಷಿಸಬಹುದು. ಅದಕ್ಕೆ ವ್ಯಥೆಪಡದೆ ಬೇರೆ ಹೊಸ ಯೋಜನೆ ರೂಪಿಸಿ. ಶುಭಸಂಖ್ಯೆ: 4

ಕುಂಭ: ಹೊಸ ಸ್ನೇಹಿತರು ಸಹಾಯ ನೀಡುವಂತಹ ಸಾಧ್ಯತೆಗಳು ಹೆಚ್ಚು. ಅವರ ಜತೆಗಿನ ಮಾತು ಆದಷ್ಟು ನಾಜೂಕಾಗಿರಲಿ. ಶುಭಸಂಖ್ಯೆ: 8

ಮೀನ : ಜಮೀನಿನ ವಿಷಯದಲ್ಲಿ ಸಹಾಯ ಮಾಡುವ ಬಂಧುಗಳನ್ನು ಆದರದಿಂದ ಕಾಣುವುದು ಸೂಕ್ತ. ಸ್ವಲ್ಪ ವ್ಯವಧಾನ ಇರಲಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net