

ಮೇಷ: ಹಣ ವ್ಯಯವಾಗುವುದು. ವ್ಯಾಪಾರದಲ್ಲಿ ನಿರೀಕ್ಷಿತ ವೃದ್ಧಿಯಾಗಲಿದೆ. ಪತ್ನಿ-ಮಕ್ಕಳೊಂದಿಗೆ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಹಿರಿಯರ ಆರೋಗ್ಯ ವಿಚಾರದಲ್ಲಿ ಕಾಳಜಿವಹಿಸಿ. ಅನವಶ್ಯಕ ವಸ್ತುಗಳಿಗಾಗಿ ಹಣವ್ಯಯ. ವಿದ್ಯಾರ್ಥಿಗಳಲ್ಲಿ ಚಾಂಚಲ್ಯ. ಶುಭಸಂಖ್ಯೆ: 1
ಮಿಥುನ: ಮನಸ್ಸಿಗೆ ಖುಷಿಯ ಕ್ಷಣಗಳು. ಮಕ್ಕಳ ಆರೋಗ್ಯದ ಕಾಳಜಿವಹಿಸಿ, ವ್ಯಾಪಾರಿಗಳಿಗೆ ಶುಭದಾಯಕವಾದ ದಿನ. ಶುಭಸಂಖ್ಯೆ: 4
ಕಟಕ: ಹಿರಿಯರೊಂದಿಗೆ ಮನಸ್ತಾಪವಾದೀತು. ಲೋಹ ವ್ಯಾಪಾರಿಗಳಿಗೆ ಅಶುಭ. ಕಟ್ಟಡ ನಿರ್ವಣದವರಿಗೆ ಒಳ್ಳೆಯ ದಿನವಲ್ಲ. ಶುಭಸಂಖ್ಯೆ: 7
ಸಿಂಹ: ವಸ್ತು ಖರೀದಿಗಳಿಗೆ ಹಣ ವ್ಯಯ ಸಾಧ್ಯತೆ. ವ್ಯಾಪಾರಿಗಳಿಗೆ ಶ್ರಮದಿಂದ ಫಲ. ಪ್ರಯಾಣದಿಂದ ಅನುಕೂಲವಾಗುವುದು. ಶುಭಸಂಖ್ಯೆ: 3
ಕನ್ಯಾ: ಗಂಭೀರ ಸ್ಥಿತಿ ಉದ್ಭವಿಸುವ ಅಪಾಯವಿದೆ. ಹಿರಿಯರೊಂದಿಗೆ ಕಲಹ. ಅಧಿಕಾರಿಗಳೊಂದಿಗೆ ವಾಗ್ವಾದ ಮಾಡುವಿರಿ. ಶುಭಸಂಖ್ಯೆ: 3
ತುಲಾ: ತಂದೆಯ ಆರೋಗ್ಯದಲ್ಲಿ ಎಚ್ಚರ. ಪ್ರವಾಸ ಕೈಗೊಳ್ಳುವಿರಿ. ಕೆಲಸ ಕಾರ್ಯಗಳಲ್ಲಿ ನೀವೆಣಿಸಿದಂತೆ ಜಯ ನಿಮಗಿದೆ. ಶುಭಸಂಖ್ಯೆ: 6
ವೃಶ್ಚಿಕ: ಶುಭವಾರ್ತೆ ಕೇಳಿ ಸಂತಸಗೊಳ್ಳುವಿರಿ. ರಾಜಕಾರಣಿಗಳಿಗೆ ಶುಭದಾಯಕ ದಿನ. ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಯಶಸ್ಸು. ಶುಭಸಂಖ್ಯೆ: 1
ಧನುಸ್ಸು; ಹಿರಿಯರ ಮಾತಿಗೆ ತಕ್ಕಂತೆ ನಡೆದುಕೊಳ್ಳಿ. ಕೆಲಸದಲ್ಲಿ ಎಚ್ಚರ. ವ್ಯಾಪಾರದಲ್ಲಿ ಮಂದಗತಿ. ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 5
ಮಕರ: ಭೂ ವ್ಯಾಪಾರಿಗಳಿಗೆ ಅಶುಭ. ದುರ್ಜನರಿಂದ ಕಿರಿಕಿರಿಯಾಗುವುದು. ರಾಜಕೀಯ ವ್ಯಕ್ತಿಗಳಿಗೆ ತೊಂದರೆಯಾಗಲಿದೆ. ಶುಭಸಂಖ್ಯೆ: 3
ಕುಂಭ: ದುಡುಕು ಮಾತುಗಳನ್ನು ಆಡಬೇಡಿ. ಪ್ರಯತ್ನಕ್ಕೆ ತಕ್ಕ ಸ್ಥಾನಮಾನ ದೊರೆಯುವುದು. ಅನ್ಯರೊಂದಿಗೆ ಜಗಳವಾಗುವ ಸಂಭವ. ಶುಭಸಂಖ್ಯೆ: 2
ಮೀನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ. ಕೃಷಿ ಪದಾರ್ಥಗಳ ವ್ಯಾಪಾರಸ್ಥರಿಗೆ ಶುಭ. ಲೇವಾದೇವಿ ವ್ಯವಹಾರದಲ್ಲಿ ಅಶುಭ. ಶುಭಸಂಖ್ಯೆ:4