ನಿತ್ಯ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕ ಬೆಳವಣಿಗೆಯಲ್ಲಿ ಹಳೆಯ ಸಂಕಟಗಳು ದೂರಾಗಲಿವೆ

Nitya-Bhavishya-vvani-1-2-1
Published on

ಮೇಷ: ಬರಿಯ ಕಾಲ್ಪನಿಕವಾದ ಯೋಜನೆಗಳಲ್ಲಿಯೇ ಮೈಮರೆಯುವ ಮುಗ್ಧತೆ ಬೇಡ. ಇದನ್ನು ಬಿಟ್ಟರೆ ವೃತ್ತಿಯಲ್ಲಿ ನಿಮಗೆ ಕ್ಷೇಮವಿದೆ. ಶುಭಸಂಖ್ಯೆ: 8

ವೃಷಭ: ದೂರದ ಊರಿನ ಪ್ರವಾಸ ಅನಿವಾರ್ಯವೇ ಆದರೆ ಕುಲದೇವರಿಗೆಂದು ಕಾಣಿಕೆಯನ್ನು ಇರಿಸಿಯೇ ಪ್ರಯಾಣ ಮಾಡಿ. ಶುಭಸಂಖ್ಯೆ: 2

ಮಿಥುನ: ಯಾವಾಗಲೂ ಮಾತಿನ ಅರಮನೆಯನ್ನೇ ಕಟ್ಟುತ್ತಿದ್ದರೆ ಪ್ರಮುಖ ವಿಚಾರವೊಂದು ನಿಮ್ಮಿಂದ ದೂರವಾಗಲಿದೆ. ಶುಭಸಂಖ್ಯೆ: 7

ಕಟಕ: ಪ್ರಯಾಣ ಕೈಗೊಂಡಿರುವ ಸಂದರ್ಭ ನೀವು ಅಂದುಕೊಂಡಷ್ಟು ಸರಳವಾಗಿ ಜರುಗಲಾರದು. ಈ ವೇಳೆ ನಿಮ್ಮ ಜಾಣ್ಮೆ ಬಳಸಿ. ಶುಭಸಂಖ್ಯೆ: 1

ಸಿಂಹ: ಆತ್ಮೀಯರೊಬ್ಬರು ಬಿರುಸಾದ ಮಾತುಗಳಿಂದ ಆಕ್ಷೇಪಗಳನ್ನು ವ್ಯಕ್ತಪಡಿಸಬಹುದು. ತಿರುಗಿ ಏನೂ ಮಾತಾಡದೆ ಸುಮ್ಮನಿರಿ. ಶುಭಸಂಖ್ಯೆ: 4

ಕನ್ಯಾ: ವಿಘ್ನಸಂತೋಷಿಗಳಿಂದ ಹಲವಾರು ರೀತಿಯ ತೊಂದರೆಗಳು ಎದುರಾಗಲಿವೆ. ಈ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿದ್ದರೆ ಒಳಿತಿದೆ. ಶುಭಸಂಖ್ಯೆ: 9

ತುಲಾ: ಸೋದರ ಸಂಬಂಧಿಗಳ ಜತೆ ಸ್ವಲ್ಪ ಮಟ್ಟಿಗೆ ಮೃದುವಾಗಿಯೇ ವರ್ತಿಸಿ. ಅವರಿಂದ ನೆರವನ್ನು ಮಾತ್ರ ಖಂಡಿತ ಯಾಚಿಸದಿರಿ. ಶುಭಸಂಖ್ಯೆ: 3

ವೃಶ್ಚಿಕ: ಅಪರಿಚಿತ ವ್ಯಕ್ತಿಯೊಬ್ಬರು ನಿಮಗಾಗಿರುವ ದುಃಖ ದುಮ್ಮಾನಗಳಿಗೆ ಸ್ಪಂದಿಸುವುದರಿಂದ ಸಂತೋಷ ಹೊಂದಲಿದ್ದೀರಿ. ಶುಭಸಂಖ್ಯೆ: 6

ಧನುಸ್ಸು:  ಆಕಸ್ಮಿಕವಾದ ಬೆಳವಣಿಗೆಯೊಂದರಲ್ಲಿ ಹಳೆಯ ಕೆಲವು ಸಂಕಟಗಳಿಗೆ ಪೂರ್ಣವಿರಾಮ ದೊರೆಯಲು ಸಾಧ್ಯವಿದೆ. ಶುಭಸಂಖ್ಯೆ: 5

ಮಕರ: ಬಾಳಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಮನೆಯನ್ನು ನಡೆಸುವವರ ಬಗ್ಗೆ ಖಂಡಿತ ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 7

ಕುಂಭ: ಅಗೋಚರ ವಿಧಿಯ ಬಗೆಗೆ ನಂಬಿಕೆ ಇಟ್ಟು ಶ್ರದ್ಧೆಯಿಂದ ಪ್ರಾರ್ಥನೆ ಮಾಡಿ. ಮನಸ್ಸಿನ ಸಂಕಲ್ಪಗಳು ಸಿದ್ಧಿಸಲಿವೆ. ಶುಭಸಂಖ್ಯೆ: 2

ಮೀನ:  ಮೊದಲು ನಿಮ್ಮನ್ನು ನೀವು ಗೆದ್ದರೆ ನಂತರ ಜಗತ್ತನ್ನೇ ಗೆಲ್ಲಬಹುದು. ಶಿವನ ಧ್ಯಾನದಿಂದ ಏಕಾಗ್ರತೆ ಸಿದ್ಧಿಯಾಗಲಿದೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net