ನಿತ್ಯ ಭವಿಷ್ಯ: ಈ ರಾಶಿಯವರಿಂದು ದೂರದ ಪ್ರವಾಸಗಳನ್ನು ಮುಂದಕ್ಕೆ ಹಾಕುವುದೇ ಉತ್ತಮ

Nitya-Bhavishya-vvani-1-2-1
Published on

ಮೇಷ: ಸದ್ಯ ದೂರದ ಪ್ರವಾಸಗಳನ್ನು ಮುಂದಕ್ಕೆ ಹಾಕುವುದೇ ಉತ್ತಮ. ಮುಂದಿನ ವಿಚಾರಗಳಿಗೆ ಬೇಕಾದ ಸಾಮರ್ಥ್ಯ ಹೆಚ್ಚಲಿದೆ. ಶುಭಸಂಖ್ಯೆ: 7

ವೃಷಭ: ಸುಮ್ಮನೆ ಕಿರಿಕಿರಿ ಮಾಡುವಂತಹ ಜನರು ಹತ್ತಿರದಲ್ಲಿಯೇ ಇರುತ್ತಾರೆ. ಅವರೊಡನೆ ಸಹನೆಯಿಂದಲೇ ವ್ಯವಹರಿಸಿ. ಶುಭಸಂಖ್ಯೆ: 3

ಮಿಥುನ: ಭೂಸಂಬಂಧಿ ವ್ಯವಹಾರ, ಕಬ್ಬಿಣದ ವಸ್ತುಗಳ ವಹಿವಾಟು ನಡೆಸುವವರು ಈ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಶುಭಸಂಖ್ಯೆ: 1

ಕಟಕ: ಬಾಳಸಂಗಾತಿಯೊಡನೆ ಅನವಶ್ಯಕವಾದ ಮನಸ್ತಾಪ ಮಾಡಿಕೊಳ್ಳಬೇಡಿ. ಇದು ವಿವಿಧ ಕಗ್ಗಂಟುಗಳನ್ನು ನಿರ್ವಿುಸುತ್ತದೆ. ಶುಭಸಂಖ್ಯೆ: 9

ಸಿಂಹ: ಮುಂಗೋಪದಿಂದಾಗಿ ಅನೇಕ ಒಳಿತಿನ ಅವಕಾಶಗಳನ್ನು ಕಳೆದುಕೊಂಡಿದ್ದೀರಿ. ಈ ಬಗ್ಗೆ ಜಾಗ್ರತೆ ಇದ್ದೇ ಇರಲಿ. ಶುಭಸಂಖ್ಯೆ: 2

ಕನ್ಯಾ: ನೆರವಾದವರಿಗೇ ತೊಂದರೆ ಕೊಡುವಂಥ ಸಲಹೆಗಳೂ ಬರಬಹುದು. ಕೃತಘ್ನರಾಗದೆ ಇದ್ದರೆ ಮುಂದೆ ಶುಭವಾಗಲಿದೆ. ಶುಭಸಂಖ್ಯೆ: 6

ತುಲಾ: ಒಳಾಂಗಣ ವಿನ್ಯಾಸಕಾರರು, ಗುತ್ತಿಗೆದಾರರು, ಕ್ಷೀರೋದ್ಯಮಿಗಳಿಗೆ ಶುಭವಾಗಲು ಹೊಸ ಅವಕಾಶವೊಂದು ತೆರೆಯಲಿದೆ. ಶುಭಸಂಖ್ಯೆ: 4

ವೃಶ್ಚಿಕ: ಮನದಲ್ಲೇ ಕನಸು ಕಾಣುತ್ತಿದ್ದರೆ ಪ್ರಯೋಜನ ಇಲ್ಲ. ಮುಂದಿನ ದಾರಿಯ ಬಗ್ಗೆ ಸ್ಪಷ್ಟವಾದ ತರ್ಕಗಳಿಂದ ಸಿದ್ಧಿ ಸಾಧ್ಯ. ಶುಭಸಂಖ್ಯೆ: 5

ಧನುಸ್ಸು: ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ಹೋಗುವ ನಿಮ್ಮ ಗುಣಸ್ವಭಾವಗಳು ಅಪಾರ ಜನಪ್ರಿಯತೆಯನ್ನು ತರಲಿವೆ. ಶುಭಸಂಖ್ಯೆ: 8

ಮಕರ: ಮುನ್ನುಗ್ಗುವ ಧೈರ್ಯ, ಉತ್ಸಾಹವನ್ನು ತೋರುವುದು ಯುಕ್ತ. ಅಭದ್ರತೆಯಲ್ಲಿ ಕುಗ್ಗದೆ ಸಾಗಿದರೆ ಲಾಭವಿದೆ. ಶುಭಸಂಖ್ಯೆ: 1

ಕುಂಭ: ಬಂಧುಗಳೇ ಮುಂದಾಗಿ ನಿಮಗೆ ಹಲವು ಬಗೆಯ ಸಹಾಯ ಸಹಕಾರವನ್ನು ಸಲ್ಲಿಸಲು ಬರುತ್ತಾರೆ. ನೆಮ್ಮದಿಯಾಗಿರಿ. ಶುಭಸಂಖ್ಯೆ: 7

ಮೀನ: ವಿವಾದಾಸ್ಪದ ವಿಚಾರಗಳು ಹೊಂದಾಣಿಕೆಯ ಮಾತುಕತೆಗಳ ಮೂಲಕ ಇತ್ಯರ್ಥ ಹೊಂದಲಿವೆ. ಮಹಾದೇವನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net