ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣ ಹೂಡಿಕೆ ಮಾಡುವುದಕ್ಕೆ ಇಂದು ಸುಸಮಯ, ಕುಟುಂಬದಲ್ಲಿ ಸಂಭ್ರಮದ ವಾತಾವರಣ

Nithya Bhavishya
Published on

ಮೇಷ: ಆಸೆಗಳು ಈಡೇರುವವು. ಬಂಧುಗಳಿಂದ ಆರ್ಥಿಕ ಸಹಾಯ. ಪುಣ್ಯಕರ್ಮ ಮಾಡುವ ಮನಸ್ಸು. ಚಿನ್ನದ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 1

ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ರಾಜಕೀಯ ವ್ಯಕ್ತಿಗಳ ಭೇಟಿ. ಆಸ್ತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವುದು ಕ್ಷೇಮ. ಶುಭಸಂಖ್ಯೆ:1

ಮಿಥುನ: ಹಣ ಹೂಡಿಕೆ ಮಾಡುವುದಕ್ಕೆ ಇಂದು ಸುಸಮಯ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಕೃಷಿ ಉಪಕರಣಗಳಿಂದ ಲಾಭ. ಶುಭಸಂಖ್ಯೆ: 2

ಕಟಕ: ಸರ್ಕಾರಿ ಉದ್ಯೋಗದವರಿಗೆ ಅನುಕೂಲ. ಸಕಾರಾತ್ಮಕ ಚಿಂತನೆ. ವಕೀಲರಿಗೆ ಹೆಚ್ಚಿನ ಜವಾಬ್ದಾರಿ. ಕೋರ್ಟ್ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 2

ಸಿಂಹ: ಆಟೋಮೊಬೈಲ್ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ. ಹೋಟೆಲ್ ಉದ್ಯಮಿಗಳಿಗೆ ಅನುಕೂಲ. ಶುಭಸಂಖ್ಯೆ:6

ಕನ್ಯಾ: ಉನ್ನತ ಅಧಿಕಾರ ಸಿಗುವುದು. ದಾಂಪತ್ಯ ಜೀವನದಲ್ಲಿ ವಿಶ್ವಾಸ ವೃದ್ಧಿಯಾಗುವುದು. ಕುಲದೇವರನ್ನು ಭಕ್ತಿಯಿಂದ ಧ್ಯಾನಿಸಿ. ಶುಭಸಂಖ್ಯೆ:7

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪ. ಪೀಠೋಪಕರಣ ಗಳ ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ: 9

ವೃಶ್ಚಿಕ: ವಿದೇಶ ಪ್ರಯಾಣ ಮಾಡುವ ಸಂದರ್ಭ ಬಂದೀತು. ಸಗಟು ವ್ಯಾಪಾರಿಗಳಿಗೆ ಲಾಭ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಶುಭಸಂಖ್ಯೆ:6

ಧನುಸ್ಸು: ಅನಿರೀಕ್ಷಿತ ಹಣ ದೊರೆಯುವುದು. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಕಚೇರಿ ವಾತಾವರಣದಲ್ಲಿ ಬದಲಾವಣೆಗಳಾಗಲಿವೆ. ಶುಭಸಂಖ್ಯೆ:9

ಮಕರ: ಶುಭಕಾರ್ಯಕ್ಕೆ ಹಿತ ಶತ್ರುಗಳ ಕಾಟ. ನಿಮ್ಮ ಸ್ವಭಾವದಿಂದ ಹೊಸ ಮಿತ್ರರು ಸಿಗುವರು. ಉನ್ನತ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2

ಕುಂಭ: ಅವಿವಾಹಿತರಿಗೆ ವಿವಾಹ. ಪಾಲುದಾರಿಕೆಯಲ್ಲಿ ಮೋಸ. ದಾಂಪತ್ಯ ಸಮಸ್ಯೆಗೆ ಅಂತ್ಯ. ಕೃಷಿ ಉಪಕರಣ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 3

ಮೀನ: ನಟರಿಗೆ ಗಾಯಕರಿಗೆ ಉತ್ತಮ ವೇದಿಕೆ ಲಭ್ಯ. ಸಾಹಿತಿಗಳಿಗೆ ಧನ ಲಾಭ. ಟ್ರಾವೆಲ್ ಮಾಲೀಕರಿಗೆ ನಿರೀಕ್ಷಿತ ಲಾಭ ಸಿಗಲಿದೆ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net