

ಮುಂಬೈ: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ( Dadasaheb Phalke Award ) ನೀಡಲಾಯಿತು. 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಂದರ್ಭದಲ್ಲಿ, ಅಕ್ಟೋಬರ್ 8 ರಂದು ಮಿಥುನ್ ಚಕ್ರವರ್ತಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಮಿಥುನ್ ಚಕ್ರವರ್ತಿ ಅವರನ್ನು ಈ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ( Dadasaheb Phalke Award ) ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಪ್ರಕಟಿಸಿದರು. ಅಲ್ಲದೇ ಚಿತ್ರರಂಗಕ್ಕೆ ಮಿಥುನ್ ಮಾಡಿರುವ ಸೇವೆಯನ್ನು ಕೇಂದ್ರ ಸಚಿವರು ಶ್ಲಾಘಿಸಿದ್ದಾರೆ.
ಕೇಂದ್ರ ಸರ್ಕಾರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ( Dadasaheb Phalke Award ) ಘೋಷಿಸಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮಿಥುನ್ ಚಕ್ರವರ್ತಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಸ್ಕೋ ಡ್ಯಾನ್ಸರ್ ಚಿತ್ರದ ಮೂಲಕ ಮಿಥುನ್ ಚಕ್ರವರ್ತಿ ಖ್ಯಾತಿ ಗಳಿಸಿದರು. ಅಷ್ಟೇ ಅಲ್ಲ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಇತ್ತೀಚೆಗೆ ಮಿಥುನ್ ಚಕ್ರವರ್ತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಿಥುನ್ ಅವರು 24 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 1976 ರಲ್ಲಿ ಅತ್ಯುತ್ತಮ ನಟ , 40 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ – ತಹದರ್ ಕಥಾ ಮತ್ತು ಸ್ವಾಮಿ ವಿವೇಕಾನಂದರ ಚಲನಚಿತ್ರಗಳಿಗಾಗಿ 43 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಿಥುನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 'ಮುಕ್ತಿ', 'ಬನ್ಸಾರಿ', 'ಅಮರ್‌ದೀಪ್', 'ಪ್ರೇಮ್ ವಿವಾಹ', 'ಭಯಾನಕ್', 'ಕಸ್ತೂರಿ', 'ಕಿಸ್ಮತ್', 'ಮಿ ಔರ್ ಮೇರಾ ಸಾಥಿ', 'ಸಾಹಸ್', 'ವಾಂಟೆಡ್', 'ಬಾಕ್ಸರ್', 'ತ್ರಿನೇತ್ರ' ' ', 'ದುಷ್ಮನ್', 'ದಲಾಲ್', 'ಭೀಷ್ಮ', 'ಸುಲ್ತಾನ್', 'ಗುರು', 'ಕಿಕ್', 'ಬಾಸ್', ಡಿಸ್ಕೋ ಡ್ಯಾನ್ಸರ್, ಮಿಥುನ್ ಚಕ್ರವರ್ತಿ ಹಲವು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಮೆಚ್ಚಿದ್ದಾರೆ.