ವಿಪಕ್ಷ ನಾಯಕರ ಮೇಲೆ ಹಲ್ಲೆಗೆ ಯತ್ನ : ದ.ಕ.ಜಿಲ್ಲಾ ಬಿಜೆಪಿ ಖಂಡನೆ

blank


ಮಂಗಳೂರು : ರಾಜ್ಯದಲ್ಲಿ ಅರಾಜಕತೆ ಮಿತಿ ಮೀರುತ್ತಿದೆ. ಕ್ರಿಮಿನಲ್ಗಳ ಅಟ್ಟಹಾಸ ಅತಿಯಾಗುತ್ತಿದೆ. ಕಾಂಗ್ರೆಸಿಗರ ಪುಂಡಾಟಿಕೆ ರಾಜರೋಷವಾಗಿ ನಡೆಯುತ್ತಿದೆ.ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ಕಾಂಗ್ರೆಸ್
ಕಾರ್ಯಕರ್ತರು ದಾಳಿ ನಡೆಸಲು ಯತ್ನಿಸಿದ್ದು ಇದಕ್ಕೆ ನಿದರ್ಶನವಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಂಡತನ ಕಾಂಗ್ರೆಸ್ ಕಾರ್ಯಕರ್ತರ ಗೂಂಡತನಕ್ಕೆ ಕಾರಣವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವೈಫಲ್ಯವನ್ನು ಪ್ರತಿಪಕ್ಷದವರು ವಿರೋಧಿಸುವುದು ಸಂವಿಧಾನ ನೀಡಿರುವ ಹಕ್ಕು. ಆದರೆ ಕಾಂಗ್ರೆಸ್ ಸರ್ಕಾರ ಪ್ರತಿಪಕ್ಷದ ಆರೋಪಗಳನ್ನು ಅರಗಿಸಿಕೊಳ್ಳಲು ಆಗದೆ ಗೂಂಡಾ ಪ್ರವೃತ್ತಿ ಮೂಲಕ ದಮನಿಸುವ ತಂತ್ರವನ್ನು ಬಳಸುತ್ತಿದೆ.
ಪರಿಶಿಷ್ಟ ಜಾತಿಯ ವ್ಯಾಮೋಹದ ನಾಟಕವಾಡುವ ಕಾಂಗ್ರೆಸ್ ಅದೇ ಸಮುದಾಯದ ನಾಯಕನ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ವಿರೋಧಿಸುತ್ತಿಲ್ಲ .ಬದಲಾಗಿ ತಮ್ಮ ಪಕ್ಷದ ಕಾರ್ಯಕರ್ತರ ಕಿಡಿಗೇಡಿ ಕೃತ್ಯವನ್ನು ಸಮರ್ಥಿಸುತ್ತಿದ್ದಾರೆ. ಇದು ಖಂಡನೀಯ. ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.

blank
Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank