Photo Gallery| ಅಂಫಾನ್​ ಅನಾಹುತ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ವೈಮಾನಿಕ ಪರೀಕ್ಷೆಯ ಚಿತ್ರಣ

PM Modi
Published on

ಕರೊನಾ ಭೀತಿ ಒಂದೆಡೆಯಾದರೆ ಅಂಫಾನ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ನಲುಗಿ ಹೋಗಿದ್ದು, ಈವರೆಗೂ 80 ಮಂದಿ ಅಸುನೀಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ನಿನ್ನೆ (ಶುಕ್ರವಾರ) ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೈಮಾನಿಕ ಪರೀಕ್ಷೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲದೆ, ರಾಜ್ಯಕ್ಕೆ 1 ಸಾವಿರ ಕೋಟಿ ರೂ. ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಮೋದಿ ಅವರ ವೈಮಾನಿಕ ಸಮೀಕ್ಷೆಯ ಫೋಟೋಗಳನ್ನು ಈ ಕೆಳಗೆ ಕಾಣಬಹುದಾಗಿದೆ.

Amphan Modi 2
ಅಂಫಾನ್ ಚಂಡಮಾರುತದಿಂದಾದ ಹಾನಿಯ ಪರಿಶೀಲನೆಗಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ಜಗದೀಪ್ ಧನಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
Amphan Modi 3
ಅಂಫಾನ್ ಅನಾಹುತಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
Amphan Modi 5
ಅಂಫಾನ್ ಅನಾಹುತವನ್ನು ವೀಕ್ಷಿಸಿ ಹೆಲಿಕಾಪ್ಟರ್‌ನಿಂದಿಳಿದು ಸುದ್ದಿಗೋಷ್ಠಿಯ ಸ್ಥಳದತ್ತ ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಜಗದೀಪ್ ಧನಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
Amphan Modi 4
ಸಿಎಂ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧನಕರ್ ಜತೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿರುವುದು.
Amphan Modi 12
ಅಂಫಾನ್​ ವಿಕೋಪಕ್ಕೆ ಕಾರಿನ ಮೇಲೆ ಉರುಳಿಬಿದ್ದಿರುವ ಬೃಹತ್​ ಮರ.
Amphan Modi 8
ಅಂಫಾನ್​ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಬುಡಸಮೇತ ಧರೆಗುರುಳಿರುವ ಬೃಹತ್​ ಮರ.
Amphan Modi 7
ಅಂಫಾನ್​ ಹೊಡೆತಕ್ಕೆ ರಸ್ತೆಗಳೆಲ್ಲಾ ಜಲಾವೃತಗೊಂಡು ನಡುನೀರಿನಲ್ಲಿ ಜನರು ಸಂಚರಿಸುತ್ತಿರುವುದು.
Amphan Modi 11
ಅಂಫಾನ್​ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಬುಡಸಮೇತ ಧರೆಗುರುಳಿರುವ ಬೃಹತ್​ ಮರ.
Amphan Modi 10
ಅಂಫಾನ್​ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಬುಡಸಮೇತ ಧರೆಗುರುಳಿರುವ ಬೃಹತ್​ ಮರವನ್ನು ಸ್ಥಳೀಯರು ತೆರವುಗೊಳಿಸುತ್ತಿರುವುದು.
Amphan Modi 9
ಅಂಫಾನ್ ಚಂಡಮಾರುತದ ಅಪ್ಪಳಕ್ಕೆ ಬಸ್ಸಿನ ಮೇಲೆ ಬಿದ್ದ ಮರ.
Amphan Modi 6
ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮತ್ತು ಮಮತಾ ಬ್ಯಾನರ್ಜಿ.

ಕರೊನಾ ಭೀತಿ ಒಂದೆಡೆಯಾದರೆ ಅಂಫಾನ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ನಲುಗಿ ಹೋಗಿದ್ದು, ಈವರೆಗೂ 80 ಮಂದಿ ಅಸುನೀಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ನಿನ್ನೆ (ಶುಕ್ರವಾರ) ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೈಮಾನಿಕ ಪರೀಕ್ಷೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲದೆ, ರಾಜ್ಯಕ್ಕೆ 1 ಸಾವಿರ ಕೋಟಿ ರೂ. ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಮೋದಿ ಅವರ ವೈಮಾನಿಕ ಸಮೀಕ್ಷೆಯ ಫೋಟೋಗಳನ್ನು ಈ ಕೆಳಗೆ ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net