

ಚಾಮರಾಜನಗರ: ಪೆನ್ ಡ್ರೈವ್ ಪ್ರಕರಣದಿಂದ ಜೋರು ಸದ್ದು ಮಾಡಿದ್ದ ಹಾಸನ ಕ್ಷೇತ್ರದ ಫಲಿತಾಂಶದ ಕುರಿತು ಚಾಮರಾಜನಗರ ಎಣಿಕೆ ಕೇಂದ್ರದ ಸುತ್ತಮುತ್ತ ಕುತೂಹಲ, ಚರ್ಚೆಗಳು ಜೋರಾಗಿವೆ.
ಮತ ಎಣಿಕೆ ಕೇಂದ್ರದ ಹೊರಗೆ ನೆರೆದಿರುವ ಕಾರ್ಯಕರ್ತರು ಚಾಮರಾಜನಗರದ ಫಲಿತಾಂಶವನ್ನು ತಿಳಿದುಕೊಳ್ಳಲುತ್ತಿದ್ದಾರೆ. ಹಾಗೆಯೇ ಹಾಸನ ಕ್ಷೇತ್ರದ ಫಲಿತಾಂಶದ ಬಗ್ಗೆಯೂ ಕೇಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಗೆದ್ದರೆ ಏನಾಗಬಹುದು? ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದ ವಿ.ಸೋಮಣ್ಣ ಅವರ ತುಮಕೂರು ಫಲಿತಾಂಶವನ್ನೂ ಬೆಂಬಲಿಗರು ತಿಳಿದುಕೊಳ್ಳುತ್ತಿದ್ದಾರೆ.
ಬೆಳಗ್ಗೆ 9.46ರ ಟ್ರೆಂಡ್ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 287ರಲ್ಲಿ ಮತ್ತು ಕಾಂಗ್ರೆಸ್ 210ರಲ್ಲಿ ಹಾಗೂ ಇತರೆ 46 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 19, ಕಾಂಗ್ರೆಸ್ 6 ಮತ್ತು ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.