

ಹೆಬ್ರಿ: ಶಿಶು ಮಂದಿರದಲ್ಲಿ ಚಟುವಟಿಕೆ ಆಧಾರಿತ ಸಂಸ್ಕಾರ ಶಿಕ್ಷಣ ನೀಡುವ ಮೂಲಕ ಸವಾಜದ ಆದರ್ಶ ವ್ಯಕ್ತಿಯನ್ನು ವಾಡುವ ಪ್ರಯತ್ನ ವಾಡಲಾಗುತ್ತದೆ ಎಂದು ಅಮೃತ ಭಾರತಿ ಶಿಶು ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ಸುಧೀರ್ ನಾಯಕ್ ಹೇಳಿದರು.
ಹೆಬ್ರಿ ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರದಲ್ಲಿ ಗುರುವಾರ ನಡೆದ ಪುಟಾಣಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರಸ್ಟ್‌ನ ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ ಉದ್ಘಾಟಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಗುರುದಾಸ್ ಶೆಣೈ, ವಿಶ್ವಸ್ಥರಾದ ಶೈಲೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುವಾರ್ ಶೆಟ್ಟಿ, ಸಂಸ್ಥೆ ಮೇಲ್ವಿಚಾರಕ ರಾವೇಂದ್ರ, ಸಂಸ್ಥೆ ಮುಖ್ಯಸ್ಥ ಅರುಣ್ ಕುವಾರ್, ಅನಿತಾ, ಅಪರ್ಣಾ ಆಚಾರ್, ಶಕುಂತಲಾ ಉಪಸ್ಥಿತರಿದ್ದರು.
ಜಿಲ್ಲಾ ಶಿಶು ಶಿಕ್ಷಣ ಪ್ರಮುಖ್ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಸ್ವಾಗತಿಸಿ, ಶಿಶು ಮಂದಿರ ಮೇಲ್ವಿಚಾರಕಿ ಮೀನಾಕ್ಷಿ ವಂದಿಸಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.