ಇಂದಿರಾಗಾಂಧಿ ನಕ್ಕಾಗ ಹೇಗೆ ಕೆನ್ನೆಗೆ ಗುಳಿ ಬೀಳುತ್ತೋ ಅದೇ ರೀತಿ ಪ್ರಿಯಾಂಕ ಗಾಂಧಿ ನಗಬೇಕು: ಸಿಟಿ ರವಿ

CT Ravi
Published on

ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಿಎಂ ಬೊಮ್ಮಾಯಿಯ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಈ ಸಂದರ್ಭ ಕಾಂಗ್ರೆಸ್​ ನಾಯಕರ ಕಾಲೆಳೆದಿದ್ದಾರೆ.

ಕಾರವಾರದಲ್ಲಿ ಮಾತನಾಡಿದ ಸಿಟಿ ರವಿ, 'ಕಾಂಗ್ರೆಸ್ ನಾಯಕತ್ವ ಡಿಎನ್‌ಎ ಮೂಲಕ ಬರುತ್ತೆ ಎಂದು ಭಾವಿಸಿದೆ. ಇಂದಿರಾಗಾಂಧಿ ತರಹನೇ ಸೀರೆ ಉಡಬೇಕು. ಇಂದಿರಾಗಾಂಧಿ ನಕ್ಕಾಗ ಹೇಗೆ ಕೆನ್ನೆಗೆ ಗುಳಿ ಬೀಳುತ್ತೋ ಅದೇ ರೀತಿ ಪ್ರಿಯಾಂಕ ಗಾಂಧಿ ನಗಬೇಕು. ನಾಯಕತ್ವ ಜನರ ನಡುವೆ ಎದ್ದು ಬರಬೇಕು. ಕಾಂಗ್ರೆಸ್‌ನದು ಕೌಟುಂಬಿಕ ವಾರಸುದಾರಿಕೆ ಎನ್ನಬೇಕು' ಎಂದು ಗಾಂಧಿ ಕುಟುಂಬದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭ 'ಸುರ್ಜೆವಾಲಾ ಅವರದ್ದು ಮಾನಸಿಕ ಗುಲಾಮಗಿರಿ. ಜೀತಪದ್ದತಿಯ ಮಾನಸಿಕ ಗುಲಾಮಗಿರಿಯಲ್ಲಿರುವ ಕಾಂಗ್ರೆಸ್ ಸುರ್ಜೆವಾಲಾ ಲೀಡರ್‌ಶಿಪ್ ಇಲ್ಲ ಅನ್ನುತ್ತಾರೆ. ಚಳುವಳಿಯ ಮೂಲಕ, ಸೇವೆಯಿಂದ ಲೀಡರ‌ಶಿಪ್ ಬರಬೇಕು‌' ಎಂದು ಕಾಂಗ್ರೆಸ್​ನ ರಾಜ್ಯ ಉಸ್ತುವಾರಿಯ ಮೇಲೂ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net