More

    ಅಮುಲ್ ಪರ ಬ್ಯಾಟಿಂಗ್ ಮಾಡಿದ ಸಿ.ಟಿ ರವಿ! ಡಿಕೆಶಿ ತಿರುಗೇಟು…

    ಬೆಂಗಳೂರು: ನಂದಿನಿ-ಅಮೂಲ್ ಜಟಾಪಟಿ ವಿಚಾರವಾಗಿ ಇದೀಗ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಷಕ್ಕೆ ಗುರಿಯಾಗಿದೆ. ಈ ಬಾರಿ ವಿವಾದದ ಬಾಂಬ್​ ಸಿಡಿಸಲು ಟ್ವಿಟರ್​ ಮೊರೆ ಹೋಗಿದ್ದು ಅಮೂಲ್ ಪರ ಸಿ ಟಿ ರವಿ ಮಾತನಾಡಿದ್ದಾರೆ.

    ಅಷ್ಟಕ್ಕೂ ಸಿ.ಟಿ ರವಿ ಟ್ವೀಟ್​ ಮಾಡಿದ್ದೇನು?

    ಕಾಂಗ್ರೆಸ್​ಗೆ ಟ್ವೀಟ್ ಮೂಲಕ ಸಿ.ಟಿ ರವಿ ತಿರುಗೇಟು ನೀಡುವ ಭರದಲ್ಲಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ ಎಂದೇ ಹೇಳಬಹುದು. ಸಿ.ಟಿ ರವಿ ತಮ್ಮ ಟ್ವೀಟ್​ನಲ್ಲಿ, “ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ ಗುಲಾಮರಿಗೆ ಯಾವುದೇ ಆಕ್ಷೇಪ ಇಲ್ಲ. ಆದ್ರೆ ಭಾರತದ ಬ್ರ್ಯಾಂಡ್ ಅಮೂಲ್ ಭಾರತದಲ್ಲೇ ಉತ್ಪನ್ನ ಮಾರಿದರೆ ಇವರಿಗೆ ತೊಂದರೆ. ಇದೆಂಥ ಲೂಸರ್ಸ್​ನ ಗುಂಪು” ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

    ಜನರ ರಿಯಾಕ್ಷನ್​ ಹೀಗಿದೆ!

    ಸಿ.ಟಿ ರವಿ ಟ್ವೀಟ್ ಮಾಡುತ್ತಿದ್ದಂತೆಯೆ, ನೆಟ್ಟಿಗರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಅನೇಕರು ಆಕ್ರೋಶವನ್ನೂ ಹೊರಹಾಕಿದ್ದಾರೆ. ಟ್ವಿಟರ್ ನಲ್ಲೇ ಸಿ.ಟಿ ರವಿ ನೆಟ್ಟಿಗರಿಂದ ತರಾಟೆಗೆ ಒಳಗಾಗಿದ್ದಾರೆ. ಒಬ್ಬರಂತೂ, ನಿಮ್ಮ ಚಿಕ್ಕಮಗಳೂರಿನ ಸೀಟನ್ನು ಗುಜರಾತಿಗೆ ಬಿಟ್ಟುಕೊಡಿ ಎಂದಿದ್ದಾರೆ.

    ಸಿ.ಟಿ ರವಿ ಟ್ವೀಟ್​ಗೆ ಡಿಕೆಶಿ ಪ್ರತಿಕ್ರಿಯೆ ಹೀಗಿದೆ:

    ಸಿ.ಟಿ ರವಿ ಮಾಡಿರುವ ವಿವಾದಾತ್ಮಕ ಟ್ವೀಟ್​ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು “ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದರು. ಆ ಸಂದರ್ಭ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟರು. ಪ್ರಧಾನಿ ಆಗುವ ಅವಕಾಶ ಇದ್ದರೂ ಸೋನಿಯಾ ಗಾಂಧಿಯವರು ಅದನ್ನು ತ್ಯಾಗ ಮಾಡಿದ್ದರು. ಇದನ್ನು ಸಿ ಟಿ ರವಿ ಮೊದಲು ತಿಳಿದುಕೊಳ್ಳಲಿ.

    ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶಕ್ಕೆ ಸಾಕಷ್ಟು ತ್ಯಾಗ ಮಾಡಿದಾರೆ. ಸಿಟಿ ರವಿ ಆ ಥರದ ತ್ಯಾಗವನ್ನು ಮಾಡಿಲ್ಲ. ಒಂದು ಪಂಚಾಯ್ತಿಗೂ ತ್ಯಾಗ ಮಾಡಿಲ್ಲ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts