More

    ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಆರಂಭ!

    ಬೆಂಗಳೂರು: ಚುನಾವಣಾ ಹೊಸ್ತಿಲಲ್ಲೇ ರಾಜ್ಯದಲ್ಲಿ ನಂದಿನಿ Vs ಅಮುಲ್ ಯುದ್ಧ ಶುರುವಾಗಿದೆ. ಅಮುಲ್ ಸಂಸ್ಥೆ ಕರ್ನಾಟಕದಲ್ಲಿ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಈಗಾಗಲೇ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್, ನಂದಿನಿಯ ಕೆಚ್ಚಲನ್ನು ಬಿಜೆಪಿ ಕಡಿಯುತ್ತಿದೆ ಎಂದು ಗಂಭೀರ ಆರೋಪಗಳನ್ನೂ ಮಾಡಿದೆ.

    ಏನಿದು ಇ ಕಾಮರ್ಸ್ ಪ್ಲಾಟ್​ಫಾರ್ಮ್?

    ಇದೀಗ ದಿಗ್ವಿಜಯ ನ್ಯೂಸ್​ಗೆ ಅಮೂಲ್ ಎಂ.ಡಿ ಜಯನ್ ಮೆಹ್ತಾ ಮಾಹಿತಿ ನೀಡಿದ್ದು ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಅಮುಲ್ ಕ್ವಿಕ್ ಇ ಕಾರ್ಮರ್ಸ್ ಪ್ಲಾಟ್​ಫಾರ್ಮ್​ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಅಮೂಲ್ ಸಂಸ್ಥೆಯ ಎಂ.ಡಿ “ಆಂಧ್ರಪ್ರದೇಶದ ಮದನಪಲ್ಲಿಯಿಂದ ಬೆಂಗಳೂರಿಗೆ ಹಾಲು ಮೊಸಲು ಸರಬರಾಜು ಮಾಡ್ತೇವೆ. ಇ-ಕಾರ್ಮಸ್ ಮೂಲಕ ಅಮುಲ್ ಹಾಲು ಹಾಗೂ ಮೊಸರು ಮಾರಾಟ ಮಾಡ್ತೇವೆ” ಎಂದಿದ್ದಾರೆ.

    ನಂದಿನಿಗೂ ಅಮುಲ್​ಗೂ ಕಾಂಪಿಟೇಷನ್ ಇದ್ಯಾ?

    ನಂದಿನಿ Vs ಅಮುಲ್ ಬಗ್ಗೆ ಮಾತನಾಡಿದ ಅಮುಲ್ ಸಂಸ್ಥೆಯ ಎಂ.ಡಿ “ನಂದಿನಿ ಅಥವಾ ಕರ್ನಾಟಕ ಹಾಲು ಉತ್ಪಾದಕರ ಜೊತೆ ನಾವು ಪೈಪೋಟಿ ನಡೆಸಲ್ಲ. ನಮ್ಮ ಹಾಗೂ ಕೆಎಂಎಫ್ ಸಂಬಂಧ ಚೆನ್ನಾಗಿದೆ. ಯಾರಿಗೆ ಅಮೂಲ್ ಉತ್ಪನ್ನ ಬೇಕೋ ಅವರು ಇ- ಕಾರ್ಮಸ್ ಮೂಲಕ ಖರೀದಿ ಮಾಡಬಹುದು.ಬೆಂಗಳೂರಿನಿಂದ‌ 100 ಕಿ.ಮೀ ದೂರದ ಮದನಪಲ್ಲಿನಲ್ಲಿ ಅಮೂಲ್ ಪ್ಲಾಂಟ್ ಇದೆ. ಇಲ್ಲಿಂದ ನಾವು ರಫ್ತು ಮಾಡ್ತೇವೆ. ನಾವು ನಂದಿನಿ ಹಾಗೇ ಸ್ಟಾಲ್, ಬೂತ್ ಹಾಕೋದಿಲ್ಲ. ಅಮೂಲ್ ಗೋಲ್ಡ್ ಹಾಲು ಲೀಟರ್ ಗೆ 64 ರೂಪಾಯಿ. 450ml ಮೊಸರು 30 ರೂಪಾಯಿ ನಿಗದಿ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts