More

    ‘ನಂದಿನಿ ಎಂಬ ಹಸುವಿನ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ’: ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್​ನಿಂದ ಗಂಭೀರ ಆರೋಪ!

    ಬೆಂಗಳೂರು: ಮೊದಲು ಅಮೂಲ್ ಜೊತೆ KMF ವಿಲೀನದ ಪ್ರಸ್ತಾಪ ಮಾಡಲಾಗಿತ್ತು. ಬಳಿಕ ನಂದಿನಿ ಮೊಸರಿನ ಪಾಕೆಟ್ ಮೇಲೆ ದಹಿ ಹೆಸರು ಉಲ್ಲೇಖವಾಗಿತ್ತು ಎನ್ನುತ್ತಾ ತೀವ್ರ ವಾಗ್ದಾಳಿ ನಡೆಸುತ್ತಾ ರಾಜ್ಯ ಕಾಂಗ್ರೆಸ್​, ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಮೇಲೆ ಗಂಭೀರ ವಾಗ್ದಾಳಿ ನಡೆಸಿದೆ.

    ಗುಜರಾತ್ ಮೂಲದ ಅಮುಲ್ ಸಂಸ್ಥೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ನಂದಿನಿ ಉಳಿಸಿ, ಅಮೂಲ್ ಓಡಿಸಿ ಅಭಿಯಾನ ಜೋರಾಗಿದ್ದು ಇದೀಗ ಕಾಂಗ್ರೆಸ್​ ಕೂಡ ಅಖಾಡಕ್ಕೆ ಇಳಿದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ.

    ನಂದಿನಿ Vs ಅಮುಲ್ ಬಗ್ಗೆ ಕಾಂಗ್ರೆಸ್ ಟ್ವೀಟ್​ನಲ್ಲಿ ಏನೇನಿದೆ?

    ಈ ಬಗ್ಗೆ ಕಾಂಗ್ರೆಸ್​ ಟ್ವೀಟ್​ ಮಾಡಿದ್ದು ಯಾವಾಗೆಲ್ಲ ಏನೇನಾಯ್ತು ಎಂದು ಅದರಲ್ಲಿ ಬರೆದಿದ್ದಾರೆ. ಮೊದಲ ಟ್ವೀಟ್​ನಲ್ಲಿ
    * ಅಮುಲ್ + ನಂದಿನಿ ವಿಲೀನ ಎಂದರು
    * ಮೊಸರಿಗೆ ಹಿಂದಿಯ ‘ದಹಿ’ ಇರಲೇಬೇಕು ಎಂದರು
    * KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯಧನ ನಿಲ್ಲಿಸಿದರು
    * ಉದ್ದೇಶಪೂರ್ವಕವಾಗಿ ‘ನಂದಿನಿ’ ಉತ್ಪನ್ನಗಳ ಕೊರತೆ ಸೃಷ್ಟಿಸಿದರು
    * ಈಗ ಅಮೂಲ್‌ನ್ನು ಕರ್ನಾಟಕಕ್ಕೆ ತಂದುಬಿಟ್ಟರು
    * ನಂದಿನಿಯ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ.
    ಎಂದು ಬರೆಯಲಾಗಿದೆ.

    ನಂತರ ಎರಡನೇ ಟ್ವೀಟ್​ನಲ್ಲಿ ಬಿಜೆಪಿಯ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್​ “ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ” ಎಂದು ಆರೋಪಿಸಲಾಗಿದೆ.

    ಅದಲ್ಲದೇ ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು ಎಂದೂ ಆರೋಪಿಸಿದ್ದು KMF ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿ ಮಾಡಲಾಗಿದೆ ಎಂದೂ ಹೇಳಿದ್ದಾರೆ.

    ಹೀಗೆ ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು #ರ್ನಾಟಕ ವಿರೋಧಿ ಬಿಜೆಪಿ ಸರ್ವನಾಶ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts