

ಮುಂಬೈ: ಚೆನ್ನೈ ಸೂಪರ್ ಕಿಂಗ್ ವೇಗದ ಬೌಲರ್ ತುಷಾರ್ ದೇಶಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು, ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತುಷಾರ್ ತಮ್ಮ ಶಾಲೆಯ ಕ್ರಷ್ ನಭಾ ಗಡ್ಡಂವಾರ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಜೋಡಿಯು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಬೆರಗು ಗೊಳಿಸಿದರು. ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಕ್ರಿಕೆಟ್ ಆಟಗಾರ ಶಿವಂ ದುಬೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: VIDEO | ಅಬ್ಬಬ್ಬಾ ಎಲ್ಲಿ ನೋಡಿದ್ರು ಜೇನುನೊಣ..ಇಡೀ ನಗರವೇ ಆವೃತ!
ನಭಾ ಗಡ್ಡಂವಾರ್ ವೃತ್ತಿಯಿಂದ ಆರ್ಟಿಸ್ಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಲಾಕೃತಿಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ವರ್ಷದ ಐಪಿಎಲ್ನ ಚೆನ್ನೈ ಪಂದ್ಯದ ವೇಳೆಯೂ ಕ್ರೀಡಾಂಗಣದಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದರು.
ತುಷಾರ್ ಸಹ ಇನ್ಸ್ಟಾಗ್ರಾಮ್ನಲ್ಲಿ ನಭಾ ಜತೆಗಿನ ಸುಂದರವಾದ ಚಿತ್ರವನ್ನು ಹಂಚಿಕೊಂಡಿದ್ದು, ಈ ಜೋಡಿಗೆ ಭಾರತೀಯ ತಂಡದ ಕ್ರಿಕೆಟ್ ಆಟಗಾರರು ಹಾಗೂ ಅನೇಕ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.
ಮೇ 31ರಂದು ಅಹಮದಾಬಾದ್‌ನಲ್ಲಿ ಎದುರಾಳಿ ತಂಡ ಗುಜರಾತ್ ಟೈಟಾನ್ಸ್ ಅನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸಿಎಸ್‌ಕೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಈ ಮುಂಚೆ ಚೆನ್ನೈ ತಂಡದ ರುತುರಾಜ್ ಗಾಯಕ್ವಾಡ್, ಮಹಾರಾಷ್ಟ್ರ ತಂಡದ ಕ್ರಿಕೆಟ್ ಆಟಗಾರ್ತಿ ಉತ್ಕರ್ಷಾ ಪವಾರ್ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಿವಾಹವಾಗಿದ್ದರು.(ಏಜೆನ್ಸೀಸ್)