ಅಭಿಮಾನಿಗಳಿಂದ ಮತ್ತೊಮ್ಮೆ ಟ್ರೋಲ್ ಆದ ಸಿಎಸ್‌ಕೆ ಆಲ್ರೌಂಡರ್ ರವೀಂದ್ರ ಜಡೇಜಾ..!

jadeja for web
Published on

ದುಬೈ: ಯುವ ವೇಗಿಗಳಾದ ದೀಪಕ್ ಚಹರ್ ಹಾಗೂ ರುತುರಾಜ್ ಗಾಯಕ್ವಾಡ್ ಸೇರಿದಂತೆ 13 ಮಂದಿಗೆ ಕರೊನಾ ವೈರಸ್ ಕಾಣಿಸಿಕೊಂಡಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕರೊನಾಘಾತದಿಂದ ತತ್ತರಿಸಿದೆ. ಇದರಿಂದಾಗಿ ಕ್ವಾರಂಟೈನ್ ಅವಧಿಯನ್ನೂ ವಿಸ್ತರಿಸಿಕೊಂಡಿರುವ ಸಿಎಸ್‌ಕೆ, ದುಬೈನಲ್ಲಿರುವ ತಾಜ್ ಹೋಟೆಲ್‌ನಲ್ಲಿ ಕ್ವಾರಂಟೈನ್ ಮುಂದುವರಿಸಿದೆ. ಇದರ ಮಧ್ಯೆ ಎಸ್‌ಕೆ ತಂಡ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಅಭಿಮಾನಿಗಳಿಂದ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ‘ಚಿಲ್ಲಿಂಗ್ ವಿತ್ ಮೈ ಸೆಲ್ಫ್’ ಎಂದು ಬರೆದುಕೊಂಡು ಕಾಫಿ ಮಗ್ ಹಿಡಿದಿರುವ ತಮ್ಮ ಫೋಟೋವನ್ನು ಜಡೇಜಾ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಜತೆಗೆ ಚಿತ್ರ ಹೇಗಿದೆ ಎಂದು ಜಡೇಜಾ ಅಭಿಮಾನಿಗಳನ್ನು ಕೇಳಿದ್ದರು. ಆದರೆ ಈ ಫೋಟೋ ಟ್ರೋಲ್‌ಗೆ ಒಳಗಾಗಿದೆ.

ಕ್ವಾರಂಟೈನ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜಡೇಜಾ, ಎಂದಿನಂತೆ ಭಾನುವಾರ ಚಿತ್ರವೊಂದನ್ನು ಪ್ರಕಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು ‘ಬೇಟಾ ಫೋನ್ ಮೈ ಟೈಮ್ ಭಿ ಹೊತಾ ಹೈ’ ಎಂದು ಹೇಳುವ ಮೂಲಕ ಟ್ರೋಲ್ ಮಾಡಿದ್ದಾರೆ. ಇದಕ್ಕೆ 6 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದಕ್ಕೂ ಮೊದಲು ಜಡೇಜಾ ಹಲವು ಬಾರಿ ಟ್ರೋಲ್ ಆಗಿದ್ದಾರೆ.

ಜಡೇಜಾ ಚೆನ್ನೈನಲ್ಲಿ ನಡೆದ ಸಿಎಸ್‌ಕೆ ಶಿಬಿರದಲ್ಲಿ ಭಾಗವಹಿಸದೆ ಕಡೇ ದಿನ ತಂಡ ಕೂಡಿಕೊಂಡಿದ್ದರು. ತಂಡದ 13 ಮಂದಿಗೆ ಕೋವಿಡ್-19 ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡ ತನ್ನ ಕ್ವಾರಂಟೈನ್ ಅವಧಿಯನ್ನು ಸೆ.6ರವರೆಗೆ ವಿಸ್ತರಿಸಿಕೊಂಡಿದೆ.

ಆರ್​ಸಿಬಿ ತಂಡದ ವಿಕೆಟ್​ ಕೀಪಿಂಗ್​ ಜವಾಬ್ದಾರಿಗೆ ಎಬಿ ಡಿವಿಲಿಯರ್ಸ್ ಸಿದ್ಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net