More

    ಖಾಸಗಿ ಆಸ್ಪತ್ರೆಗಳಿಗೆ ಸಿಎಸ್ ಎಚ್ಚರಿಕೆ

    ಬೆಂಗಳೂರು: ಕರೊನಾ ಸೋಂಕಿತ ಅಥವಾ ಅಂತಹ ರೋಗಲಕ್ಷಣಗಳಿರುವವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯನ್ನು ನಿರಾಕರಿಸುವುದು ಅಥವಾ ನೀಡದಿರುವುದು ಇಲ್ಲವೇ ತಪ್ಪಿಸುವುದು ಕಾನೂನುಬಾಹಿರ ಎಂದು ರಾಜ್ಯಸರ್ಕಾರ ಆದೇಶ ಮಾಡಿದೆ.

    ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಕರೊನಾ ಆರೈಕೆ ಕೇಂದ್ರಗಳನ್ನು (ಸಿಸಿಸಿ) ಹೆಚ್ಚಿಸುವ ಅಗತ್ಯವಿದ್ದು, ಸೋಂಕು ಲಕ್ಷಣ ರಹಿತರನ್ನು ಇಲ್ಲಿ ನೋಡಿಕೊಳ್ಳಲಾಗುತ್ತದೆ. ಒಟ್ಟು 1,600 ಹಾಸಿಗೆಗಳ ಹೆಚ್ಚಿನ ಸೌಕರ್ಯ ಕಲ್ಪಿಸಲು 5 ಸಂಸ್ಥೆಗಳನ್ನು ಸಿಸಿಸಿಗಳನ್ನಾಗಿ ಸರ್ಕಾರ ಅಧಿಸೂಚಿಸಿದೆ.

    ಇದನ್ನೂ ಓದಿ: ಕೋವಿಡ್ ಪರೀಕ್ಷೆಗೆ ಮತ್ತಷ್ಟು ಬಲ: ವಿಕ್ಟೋರಿಯಾ ಲ್ಯಾಬ್ ಆರಂಭ, ಇಂದಿನಿಂದ ನಿಮ್ಹಾನ್ಸ್ ಲ್ಯಾಬ್ ಕಾರ್ಯ

    ಕರೊನಾ ರೋಗಿಗಳು ಅಥವಾ ಅಂತಹ ಲಕ್ಷಣ ಇರುವವರಿಗೂ ಪರೀಕ್ಷೆ ಹಾಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಅಲ್ಲದೆ, ಚಿಕಿತ್ಸೆ ಹಾಗೂ ಪರೀಕ್ಷೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ವೈದ್ಯಕೀಯ ಸಂಘಗಳ ಕಾಯ್ದೆ ಅನ್ವಯ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕರೋನಾ ರೋಗಿ ಬೈಕ್​ ಕಳ್ಳ ಪರಾರಿ; ಆತಂಕ ಮೂಡಿಸಿದಾತ ಮತ್ತೆ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts