More

    ಜೋಗದ ಸೌಂದರ್ಯ ಸವಿದ ಪ್ರವಾಸಿಗರ ದಂಡು

    ಕಾರ್ಗಲ್: ಶರಾವತಿ ಕೊಳ್ಳದಲ್ಲಿ ಸಾಧಾರಣ ಮಳೆ ಮುಂದುವರಿದಿರುವುದರಿಂದ ಜೋಗ ಜಲಪಾತ ಮೈದುಂಬಿದ್ದು ನೋಡುಗರನ್ನು ಸೆಳೆಯುತ್ತಿದೆ. ಭಾನುವಾರ ವರುಣ ತುಸು ವಿರಾಮ ನೀಡಿದ್ದು ಹಾಗೂ ಮಂಜಿನ ತೊಡಕಿಲ್ಲದೆ ಸ್ವಚ್ಛಂದವಾಗಿ ದರ್ಶನ ನೀಡಿದ ಜಲಪಾತದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.
    ಮಳೆ ಆರಂಭವಾದಾಗಿನಿಂದ ದಿನದ ಹೆಚ್ಚು ಸಮಯ ಜಲಪಾತ ಮಂಜಿನಲ್ಲೇ ಲೀನವಾಗುವುದು ಮಾಮೂಲಿ. ಇದರಿಂದ ಆಗಮಿಸುವ ಪ್ರವಾಸಿಗರು ಸಾಕಷ್ಟು ಬಾರಿ ನಿರಾಸೆ ಅನುಭವಿಸುತ್ತಿದ್ದರು. ಆದರೆ ಭಾನುವಾರ ಶರಾವತಿ ಕೊಳ್ಳದಲ್ಲಿ ಮಳೆ ಸ್ವಲ್ಪ ವಿಶ್ರಾಂತಿ ನೀಡಿತ್ತು. ಇದರಿಂದ ವಾರಾಂತ್ಯದಲ್ಲಿ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಜಲಪಾತ ವೀಕ್ಷಣೆ ಮಾಡಲು ಅನುಕೂಲವಾಯಿತು.
    ಜೋಗದಲ್ಲಿ ಪ್ರವಾಸಿಗರ ಜತೆಗೆ ವಾಹನ ದಟ್ಟಣೆಯೂ ಉಂಟಾಗಿತ್ತು. ಮುಖ್ಯದ್ವಾರದ ಹೊರಭಾಗದಲ್ಲಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಾವಕಾಶವಿರುವುದನ್ನು ಗಮನಿಸಿ ವಾಹನಗಳನ್ನು ಒಳಗೆ ಕಳಿಸುವುದೇ ಭದ್ರತಾ ಸಿಬಂದಿಗೆ ದಿನವಿಡೀ ತಲೆನೋವಿನ ಕೆಲಸವಾಗಿದೆ. ಭಾನುವಾರ ಇಡೀ ದಿನ ಟ್ರಾಫಿಕ್ ಜಾಮ್ ಉಂಟಾಗಿ ಸುಗಮ ಸಂಚಾರಕ್ಕಾಗಿ ಪೊಲೀಸರು ಹರಸಾಹಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts