

ಉಳ್ಳಾಲ: ಶಾಸಕ ಯು.ಟಿ.ಖಾದರ್ ಪ್ರತೀ ವಾರ್ಡ್‌ಗೆ ಕೋಟಿ ರೂ. ಅನುದಾನ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಶ್ರೀ ಪೂರ್ಣಗೊಳ್ಳಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.
ಅಮೃತ ನಗರೋತ್ಥಾನ ಯೋಜನೆಯಡಿ ಉಳ್ಳಾಲ ನರಗಸಭಾ ವ್ಯಾಪ್ತಿಯ ಮೊಗವೀರಪಟ್ಣ ಪ್ಯಾರೀಸ್ ಅಡ್ಡರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶನಿವಾರ ನಡೆದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳ್ಳಾಲ ಬೀಚ್ ರಸ್ತೆ ಅಭಿವೃದ್ಧಿಗೆ 4.50 ಕೋಟಿ ರೂ., ಉಳ್ಳಾಲಬೈಲ್ ಓವರ್ ಬ್ರಿಡ್ಜ್ ರಸ್ತೆಗೆ 40 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ. ಕೋಟೆಪುರದಿಂದ ಬೋಳಾರಕ್ಕೆ ಸೇತುವೆ ಆಗುವ ಸಂದರ್ಭ ಉಳ್ಳಾಲದ ರಸ್ತೆಗಳು ಸುಂದರವಾಗಬೇಕು ಎನ್ನುವ ನೆಲೆಯಲ್ಲಿ ತಾರತಮ್ಯ ವಾಡದೆ ಎಲ್ಲ ವಾರ್ಡುಗಳಿಗೆ ಶಾಸಕರು ಅನುದಾನ ನೀಡಿದ್ದಾರೆ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ ಕಾಮಗಾರಿಗೆ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಮಮತಾ, ಬಶೀರ್, ಅಝೀಝ್, ವಕ್ಫ್ ರಾಜ್ಯ ಸದಸ್ಯೆ ರಝಿಯಾ ಇಬ್ರಾಹಿಂ, ಪ್ರಮುಖರಾದ ನವನೀತ್, ಅಬೂಬಕ್ಕರ್, ಮನ್ಸೂರ್ ಮಂಚಿಲ ಮೊದಲಾದವರಿದ್ದರು.
ನಗರಸಭೆ ನಿಕಟಪೂರ್ವ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ನಿರೂಪಿಸಿದರು.