

ಮೂಡುಬಿದಿರೆ: ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪ ಅಥವಾ ಇನ್ಯಾವುದೇ ಕಾರಣಗಳಿಂದ ರೈತರಿಗೆ ಬೆಳೆ ನಷ್ಟ ಉಂಟಾದಾಗ ಬೆಳೆ ಪರಿಹಾರ ರೂಪದಲ್ಲಿ ನೀಡುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು. ಇದಕ್ಕೆ ಬೇಕಾದ ಅಗತ್ಯ ಮಾಹಿತಿ ಭಾರತೀಯ ಕಿಸಾನ್ ಸಂಘ ನೀಡುತ್ತದೆ ಎಂದು ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು.
ಶ್ಯಾಮಿಲಿ ಸಭಾಭವನದಲ್ಲಿ ಸೋಮವಾರ ಫಸಲ್ ಬಿಮಾ ಯೋಜನೆ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡಕ್ಕೆ ವರ್ಗಾವಣೆಗೊಂಡ ತಾಲೂಕು ತೋಟಗಾರಿಕೆ ಅಧಿಕಾರಿ ಯುಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಯುಗೇಂದ್ರ ಕುರಿತು ರಶ್ಮಿತಾ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿದರು.
ಕಲ್ಲಮುಂಡ್ಕೂರು ಗ್ರಾಪಂ ಸದಸ್ಯೆ ಪ್ರೇಮಾ ಶೆಟ್ಟಿ ಉಪಸ್ಥಿತರಿದ್ದರು. ಪ್ರವೀಣ್ ಭಂಡಾರಿ ಸ್ವಾಗತಿಸಿದರು. ಅಶೋಕ್ ಶೆಟ್ಟಿ ನಿರೂಪಿಸಿದರು. ಶಿವಕುಮಾರ್ ಶೆಟ್ಟಿ ವಂದಿಸಿದರು.