ಅನಾಥ ಬಾಲಕನಿಗೆ ಬದುಕು ಕಟ್ಟಿಕೊಟ್ಟ ಕಾಲ್ಚೆಂಡಿನ ಚತುರ..ರೊನಾಲ್ಡೊ ಕೊಟ್ಟ ನೆರವು ಎಷ್ಟು ಗೊತ್ತಾ?

ronaldo (1)
Published on

ಲಿಸ್ಬನ್(ಪೋರ್ಚುಗಲ್): ಫುಟ್ಬಾಲ್​ಲೋಕದಲ್ಲಿ ದಾಖಲೆ ಬರೆದಿರುವ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ನಿ ಅವಘಡದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿದ್ದ ಬಾಲಕನ ಜೀವನಕ್ಕೆ ಆಧಾರಸ್ತಂಭವಾಗಿದ್ದಾರೆ.

ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡಿ ಬದುಕುಳಿದ ಪೋರ್ಚುಗಲ್‌ನ ಅಭಿಮಾನಿಗೆ ರೊನಾಲ್ಡೊ ಬರೋಬ್ಬರಿ 1ಲಕ್ಷ ಅಮೆರಿಕನ್​ ಡಾಲರ್​(83 ಲಕ್ಷ) ರೂ.ಗಳನ್ನು ಬದುಕು ಕಟ್ಟಿಕೊಳ್ಳಲು ನೆರವಿನ ರೂಪದಲ್ಲಿ ನೀಡಿದ್ದಾರೆ.

ಅಗ್ನಿ ಅವಘಡದಲ್ಲಿ ತನ್ನೆರಡು ಕೈಗಳು ಸುಟ್ಟು ಹೋಗಿದ್ದಲ್ಲದೆ, ತನ್ನ ಕುಟುಂಬವನ್ನು ಕಳೆದುಕೊಂಡ ನಂತರ ಕೋಮಾದಲ್ಲಿ ಸುಮಾರು ಎರಡು ವಾರ ಕಳೆದ ಫ್ರಾನ್ಸಿಸ್ಕೊ ಚೇತರಿಸಿಕೊಂಡಿದ್ದು, ಆತನನ್ನು ಮನೆಯಲ್ಲಿ ಭೇಟಿಯಾದ ರೊನಾಲ್ಡೊ ನೆರವು ನೀಡಿ ಆಶೀರ್ವಾದಿಸಿದರು.

ಪ್ರಸ್ತುತ ಫ್ರಾನ್ಸಿಸ್ಕೊ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಾನೆ. ಬಾಲಕ ಫ್ರಾನ್ಸಿಸ್ಕೊ ಪರಿಸ್ಥಿತಿ ಕುರಿತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳಾದ ಜಚೆರಿ ಡೆರೆನಿಯೊವ್ಸ್ಕಿ (ಎಂಡಿಮೋಟಿವೇಟರ್) ಮತ್ತು ಐಶೋಸ್ಪೀಡ್ ರೊನಾಲ್ಡೊ ಅವರನ್ನು ಭೇಟಿ ಮಾಡಿಸಲು ಯತ್ನಿಸಿ ಯಶಸ್ವಿಯಾಗಿದ್ದಾರೆ. ಫ್ರಾನ್ಸಿಸ್ಕೊ ಬದುಕು ಕಟ್ಟಿಕೊಳ್ಳಲು ಅವರು ನಡೆಸಿದ ಪ್ರಯತ್ನಗಳಿಗೆ ರೊನಾಲ್ಡೊ ಧನ್ಯವಾದ ಸಲ್ಲಿಸಿದ್ದಾರೆ. ಫುಟ್​ಬಾಲ್​ ಹೀರೋ ನಿಜಜೀವನದಲ್ಲೂ ಹೀರೋ ಆಗಿದ್ದಾರೆ ಎಂದು ನೆಟ್ಟಿಗರು ರೊನಾಲ್ಡೊ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net