ಕೆರೆಯಲ್ಲಿ ಮುಳುಗಿ ಓರ್ವ ಮೃತ್ಯು, ಮತ್ತೋರ್ವ ಗಂಭೀರ

boy death
Published on

ಕಾಸರಗೋಡು: ನಗರದ ತಳಂಗರೆ ಮಾಲಿಕ್‌ದೀನಾರ್ ಮಸೀದಿ ಸನಿಹದ ಕೆರೆಯಲ್ಲಿ ಸ್ನಾನಕ್ಕಿಳಿದ ಸಹೋದರರಲ್ಲಿ ಓರ್ವ ಮೃತಪಟ್ಟು, ಗಂಭೀರ ಸ್ಥಿತಿಯಲ್ಲಿದ್ದ ಇನ್ನೋರ್ವನನ್ನು ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿದೆ. ಬೆಂಗಳೂರು ತಾನಿ ರಸ್ತೆ ನಿವಾಸಿ ಮುಜಾಹಿದ್ ಎಂಬುವರ ಪುತ್ರ ಫೈಸಾನ್(22) ಮೃತಪಟ್ಟ ಯುವಕ. ಸಹೋದರ ಸಕ್ಲೀನ್ (20)ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಕುಟುಂಬದ ಹನ್ನೊಂದು ಮಂದಿ ಸದಸ್ಯರೊಂದಿಗೆ ಕೇರಳ ಪ್ರವಾಸಕ್ಕೆ ಆಗಮಿಸಿದ್ದ ಮುಜಾಹಿದ್, ಮಂಗಳವಾರ ಸಂಜೆ ತಳಂಗರೆಯ ಮಾಲಿಕ್‌ದೀನಾರ್ ಮಸೀದಿಗೆ ಭೇಟಿ ನೀಡಿ ಕೊಠಡಿ ಪಡೆದು ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಗ್ಗೆ ಸಹೋದರರು ಕೆರೆಗೆ ಸ್ನಾನಕ್ಕಿಳಿದಿದ್ದು, ಸಕ್ಲೀನ್ ಆಯತಪ್ಪಿ ನೀರಿಗೆ ಬಿದ್ದಿದ್ದರು. ಆತನ ರಕ್ಷಣೆಗೆ ಮುಂದಾದ ಫೈಸಾನ್ ಕೂಡ ಮುಳುಗೇಳುತ್ತಿದ್ದರು. ಇದನ್ನು ಕಂಡು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಇಬ್ಬರನ್ನೂ ಮೇಲಕ್ಕೆತ್ತಿ ಸನಿಹದ ಆಸ್ಪತ್ರೆಗೆ ದಾಖಲಿಸಿದರೂ, ಫೈಸಾನ್ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಸಕ್ಲೀನ್ ಚೇತರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net