ಸಾಲ ಪಡೆದು ವಂಚಿಸಿದ್ದವಳು ಹತ್ತು ವರ್ಷ ಬಳಿಕ ಅಂದರ್

Arrest Kaidhi
Published on

ಕಾಸರಗೋಡು: ಸಾಲ ಪಡೆದು ವಂಚಿಸಿದ್ದ ಮಹಿಳೆಯನ್ನು ಹತ್ತು ವರ್ಷಗಳ ನಂತರ ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕನ್ಯಪ್ಪಾಡಿ ಬಿ.ಸಿ.ರೋಡ್ ನಿವಾಸಿ, ಪ್ರಸಕ್ತ ಕಲ್ಲಕಟ್ಟದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ನಫೀಸಾ ಕೆ. ಬಂಧಿತೆ. ಕುಂಬಳೆ ಕೊಡ್ಯಮ್ಮೆ ನಿವಾಸಿ ಸುಮಯ್ಯ ಎಂಬುವರ ದೂರಿನ ಮೇರೆಗೆ ಈಕೆಯನ್ನು ಬಂಧಿಸಲಾಗಿದೆ.

2014 ಅ.15ರಂದು ಪುತ್ರಿಯ ವಿವಾಹಕ್ಕಾಗಿ 2.85 ಲಕ್ಷ ರೂ. ಸಾಲ ರೂಪದಲ್ಲಿ ನೀಡಲಾಗಿದ್ದು, ನಂತರ ಹಣ ವಾಪಾಸು ಮಾಡದೆ ನಫೀಸಾ ವಂಚಿಸಿರುವುದಾಗಿ ಸುಮಯ್ಯ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಫೀಸಾ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಾ ಬಂದಿದ್ದು, ಪ್ರಸಕ್ತ ಕಲ್ಲಕಟ್ಟದಲ್ಲಿ ಬಾಡಿಗೆ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net