ಮಹಿಳೆ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿ

Published on

ಕಾಸರಗೋಡು: ವೆಳ್ಳರಿಕುಂಡು ಮಾಲೋಂ ಕಾರ್ಯೋಟ್‌ಚ್ಚಾಲ್ ಎಂಬಲ್ಲಿ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆ ಕತ್ತಿನಿಂದ ವ್ಯಕ್ತಿಯೊಬ್ಬ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಇಲ್ಲಿನ ನಿವಾಸಿ ಜೋಸ್ ಎಂಬುವರ ಪತ್ನಿ ಮಂಜುಜೋಸ್ ಚಿನ್ನ ಕಳೆದುಕೊಂಡವರು. ಮಹಿಳೆ ಬಟ್ಟೆ ತೊಳೆಯುತ್ತಿರುವ ಮಧ್ಯೆ ಬೈಕಲ್ಲಿ ಆಗಮಿಸಿದ ವ್ಯಕ್ತಿ, ಕತ್ತಿನಿಂದ ಒಂದು ಪವನ್ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ವೆಳ್ಳರಿಕುಂಡು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net