ಅಪ್ಪ-ಅಮ್ಮನಾಗುತ್ತಿರುವ ವಿಷಯ ಹಂಚಿಕೊಂಡ ಮಾಜಿ ಕ್ರಿಕೆಟಿಗ, ನಟಿ

zaheer khan and sagarika ghatge
Published on

ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮ ಐಪಿಎಲ್ ಆಡಲು ಯುಎಇಗೆ ತಲುಪಿದ ಬಳಿಕ ಅಪ್ಪ-ಅಮ್ಮನಾಗುತ್ತಿರುವ ವಿಷಯ ಹಂಚಿಕೊಂಡಿದ್ದರು. ಇದೀಗ ಇವರ ಸಾಲಿಗೆ ಮತ್ತೊಂದು ತಾರಾ ಜೋಡಿ ಸೇರ್ಪಡೆಗೊಂಡಿದೆ. ಅದು ಕೂಡ ಯುಎಇಯಲ್ಲೇ ಈ ಸಂತೋಷದ ವಿಷಯ ಹಂಚಿಕೊಂಡಿರುವುದು ವಿಶೇಷ. ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ನಟಿ ಸಾಗರಿಕಾ ಘಾಟ್ಕೆ ಜೋಡಿ ಅಪ್ಪ-ಅಮ್ಮನಾಗುತ್ತಿರುವ ವಿಷಯವನ್ನು ಆಪ್ತರ ಹೇಳಿಕೊಂಡಿದೆ. ಅಪ್ಪ-ಅಮ್ಮನಾಗುತ್ತಿರುವ ವಿಷಯವನ್ನು ಈ ಜೋಡಿ ಅಧಿಕೃತವಾಗಿ ಪ್ರಕಟಿಸದಿದ್ದರೂ ಆಪ್ತ ಸ್ನೇಹಿತರ ಬಳಿಕ ಹಂಚಿಕೊಂಡಿದೆ ಎಂದು ತಿಳಿದು ಬಂದಿದೆ. ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ವ್ಯವಹಾರಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ 2017ರಲ್ಲಿ ಮದುವೆಯಾಗಿದ್ದರು. ಜಹೀರ್ ಖಾನ್ ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಜತೆಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಜಹೀರ್ ಖಾನ್ ಹಾಗೂ ಸಾಗರಿಕಾ ಜೋಡಿ ಮುಂಬೈನ ಕೋರ್ಟ್‌ನಲ್ಲಿ ಮದುವೆಯಾಗಿದ್ದರೂ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ವಿವಾಹ ಆರತಕ್ಷತೆ ಮಾಡಿಕೊಂಡಿತ್ತು.

ಕೊಹ್ಲಿ-ಅನುಷ್ಕಾ ಶರ್ಮ ಜೋಡಿ ಮುಂದಿನ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಜೋಡಿ ಹಂಚಿಕೊಂಡಿತ್ತು. ಜತೆಗೆ ಅನುಷ್ಕಾ ಶರ್ಮ ಕೂಡ ಬೇಬಿ ಬಂಪ್‌ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net