

ನವದೆಹಲಿ: ಕ್ರಿಕೆಟ್ ಮತ್ತು ಸಿನಿಮಾ ಈ ಎರಡರಷ್ಟೇ ಜನಪ್ರಿಯತೆ ಬೇರೆ ಯಾವುದಕ್ಕೂ ಇಲ್ಲ. ಅಭಿಮಾನಿಗಳು ಜನಸಂಖ್ಯೆಯು ಕ್ರಿಕೆಟ್ ಮತ್ತು ಸಿನಿಮಾವನ್ನು ಆರಾಧಿಸುತ್ತಾರೆ. ಮತ್ತು ಇವೆರಡೂ ಒಂದಾದರೆ ಆ ಖುಷಿಯೇ ಬೇರೆ. ಇತ್ತೀಚೆಗಷ್ಟೇ ಕ್ರಿಕೆಟ್ ಆಟಗಾರೊಬ್ಬರು ಡೈರೆಕ್ಟರ್ ಆಗಿ ಸಿನಿಮಾ ಮಾಡುತ್ತೇನೆ ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ತಮಿಳುನಾಡು ಮತ್ತು ಕೆಕೆಆರ್ ಪರ ಆಡಿದ್ದರು. ಇತ್ತೀಚೆಗಿನ ಐಪಿಎಲ್ನಲ್ಲಿ ವರುಣ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕೆಕೆಆರ್ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಅವರ ಪಾತ್ರ ದೊಡ್ಡದಿತ್ತು. ಇತ್ತೀಚೆಗೆ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನ ಸಂದರ್ಶನವೊಂದರಲ್ಲಿ ವರುಣ್ ಚಕ್ರವರ್ತಿ ಆಸಕ್ತಿದಾಯಕ ವಿಷಯವನ್ನು ಹೇಳಿದ್ದಾರೆ.
ಈ ಸಂದರ್ಶನದಲ್ಲಿ ವರುಣ್ ಚಕ್ರವರ್ತಿ ಮಾತನಾಡಿ, ನನಗೆ ಹಲವು ಕನಸುಗಳಿದ್ದವು. ಇದೀಗ ನನ್ನ ಬಳಿ ಒಂದು, ಎರಡು, ಮೂರು ಗುರಿಗಳಿವೆ. ನಾನು ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಚಲನಚಿತ್ರ ನಿರ್ಮಾಣವು ನನ್ನ ಕನಸು. ಖಂಡಿತಾ ಸಿನಿಮಾ ನಿರ್ಮಾಣದತ್ತ ಹೋಗುತ್ತೇನೆ. ನಾನು ಕಥೆಗಳು ಮತ್ತು ದೃಶ್ಯಗಳನ್ನು ಬರೆಯಲು ಇಷ್ಟಪಡುತ್ತೇನೆ. ಈಗಾಗಲೇ ಮೂರು ಕಥೆಗಳನ್ನು ಬರೆದಿದ್ದೇನೆ. ಸ್ಕ್ರಿಪ್ಟ್ ಸೇರಿದಂತೆ ಆ ಕಥೆಗಳು ಸಿದ್ಧವಾಗಿವೆ. ನಿರ್ದೇಶಕನಾಗಿ ವಿಜಯ್ ಜತೆ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ ಎಂದಿದ್ದರು.
ಈ ಸುದ್ದಿ ವೈರಲ್ ಆಗಿದ್ದು ಅಭಿಮಾನಿಗಳು ನಾವು ಕಾತಯರತೆಯಿಂದ ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ವರುಣ್ ಚಕ್ರವರ್ತಿ ಅವರ ಆಟದ ವೈಖರಿಯನ್ನು ಮೈದಾನದಲ್ಲಿ ನೋಡಿದ್ದ ಅಭಿಮಾನಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಳ್ಳುವುದನ್ನು ನೋಡಲು ಕಾತುರರಾಗಿದ್ದಾರೆ.