ಪತ್ನಿಯ ಅಜ್ಜನ ಪುಣ್ಯತಿಥಿ, ಸೂರ್ಯಕುಮಾರ್​ ಯಾದವ್​ ಭಾಗಿ

UDP-9-4-Sooryakumar
ಉಡುಪಿಯ ಸಾಯಿರಾಧಾ ಗ್ರೂಪ್​ನ ಎಂಡಿ ಮನೋಹರ್​ ಶೆಟ್ಟಿ ಅವರ ಮನೆಗೆ ಕ್ರಿಕೆಟರ್​ ಸೂರ್ಯಕುಮಾರ್​ ಯಾದವ್​ ದಂಪತಿ ಭೇಟಿ ನೀಡಿದರು. ಅನುರಾಧಾ ಶೆಟ್ಟಿ, ಸಿದ್ಧಾರ್ಥ ಶೆಟ್ಟಿ, ಶರಣಂ ಶೆಟ್ಟಿ ಇದ್ದರು.
Published on

ಉಡುಪಿ: ಸಾಯಿರಾಧಾ ಗ್ರೂಪ್​ನ ವ್ಯವಸ್ಥಾಪಕ ನಿರ್ದೇಶಕ ಮನೋಹರ್​ ಎಸ್​. ಶೆಟ್ಟಿ ತಂದೆ ಸುಂದರ್​ ಕೆ. ಶೆಟ್ಟಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಇಂಡಿಯನ್​ ಕ್ರಿಕೆಟರ್​ ಸೂರ್ಯಕುಮಾರ್​ ಯಾದವ್​ ದಂಪತಿ ಪಾಲ್ಗೊಂಡರು.

ಕಾಪುವಿನಲ್ಲಿರುವ ರಾಧಾ ಛಾಯಾ ಮನೆಗೆ ಆಗಮಿಸಿದ್ದ ಸೂರ್ಯಕುಮಾರ್​, ದಿ.ಸುಂದರ್​ ಕೆ. ಶೆಟ್ಟಿ ದಂಪತಿ ಇರುವ ಭಾವಚಿತ್ರಕ್ಕೆ ಪತ್ನಿಯೊಂದಿಗೆ ನಮಿಸಿದರು.

ಪತ್ನಿಯ ಅಜ್ಜನ ಮನೆ

ಸೂರ್ಯಕುಮಾರ್​ ಪತ್ನಿ ದೇವೀಶಾ ಶೆಟ್ಟಿ, ಸಾಯಿರಾಧಾ ಗ್ರೂಪ್​ನ ಎಂಡಿ ಮನೋಹರ್​ ಶೆಟ್ಟಿ ಅವರ ಸಹೋದರಿ ಲತಾ ಶೆಟ್ಟಿಯ ಸುಪುತ್ರಿಯಾಗಿದ್ದಾರೆ. ಪತ್ನಿಯ ಅಜ್ಜನ ಪುಣ್ಯತಿಥಿಯಲ್ಲಿ ಪಾಲ್ಗೊಂಡು, ಸಂಬಂಧಿಕರೊಂದಿಗೆ ಕೆಲ ಸಮಯ ಕಳೆದರು.

ಈ ಸಂದರ್ಭದಲ್ಲಿ ಮನೋಹರ್​ ಶೆಟ್ಟಿ ಪತ್ನಿ ಅನುರಾಧಾ ಶೆಟ್ಟಿ, ಪುತ್ರರಾದ ಸಿದ್ಧಾರ್ಥ ಶೆಟ್ಟಿ, ಶರಣಂ ಶೆಟ್ಟಿ ಹಾಗೂ ರವಿ ಶೆಟ್ಟಿ, ಉದಯ ಶೆಟ್ಟಿ, ಜಯರಾಂ ಶೆಟ್ಟಿ ಇತರರಿದ್ದರು.

UDP-9-4A-Sooryakumar
ಕಾಪು ಹೊಸಮಾರಿಗುಡಿ ದೇಗುಲಕ್ಕೆ ತೆರಳಿದ ಕ್ರಿಕೆಟರ್ ಸೂರ್ಯಕುಮಾರ್​ ಹಾಗೂ ಪತ್ನಿ ದೇವೀಶಾ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿ, ದೇವಿಗೆ 21 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಶಿಲಾಕಂಬ ಅರ್ಪಣೆ ಮಾಡಿದರು.

ನಿನ್ನೆ ನನ್ನ ತಂದೆಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸೂರ್ಯಕುಮಾರ್​ ಯಾದವ್​ ದಂಪತಿ ಪಾಲ್ಗೊಂಡಿದ್ದರು. ಬಳಿಕ ಅವರು ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸಮಾರಿಗುಡಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅವರ ಪತ್ನಿ ದೇವೀಶಾ ಶೆಟ್ಟಿ 21 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಶಿಲಾಕಂಬವನ್ನು ದೇವಿಗೆ ಅರ್ಪಣೆ ಮಾಡಿದರು. ಮನೋಹರ್​ ಎಸ್​. ಶೆಟ್ಟಿ.ಎಂಡಿ, ಸಾಯಿರಾಧಾ ಗ್ರೂಪ್​, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net