More

    ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗನನ್ನು ಭೇಟಿಯಾದ ರಣಬೀರ್ ಕಪೂರ್, ಆಲಿಯಾ ಭಟ್

    ಮುಂಬೈ: ಬಾಲಿವುಡ್​​ನ ಸ್ಟಾರ್​​ ಜೋಡಿಯಾದ ರಣಬೀರ್ ಕಪೂರ್, ಆಲಿಯಾ ಭಟ್ ದಂಪತಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗನನ್ನು ಭೇಟಿಯಾಗಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿವೆ.

    ತಮ್ಮ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಸ್ಟಾರ್ ಕ್ರಿಕೆಟಿಗನ ಜೊತೆ.. ಅದೂ ಪಕ್ಕದ ದೇಶದ ಸ್ಟಾರ್ ಕ್ರಿಕೆಟಿಗನ ಜೊತೆ ಫೋಟೋಗಳಿಗೆ ಪೋಸ್ ಕೊಡುವ ಮೂಲಕ ವೈರಲ್ ಆಗಿದೆ. ಈ ಭೇಟಿ ಹಿಂದನ ಉದ್ದೇಶವೇನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಪ್ರೇಕ್ಷಕರಿಗೆ ತಕ್ಷಣ ನೆನಪಾಗುವುದು ಗುಜರಾತ್ ಟೈಟಾನ್ಸ್ ಬೌಲರ್. ಈ ಸ್ಟಾರ್ ಕ್ರಿಕೆಟಿಗನನ್ನು ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಭೇಟಿಯಾದರು. ರಣಬೀರ್ ಕಪೂರ್ ತಮ್ಮ ಮಗಳು ರಾಹಾ ಜತೆಗೆ ಯುಎಸ್ ಪ್ರವಾಸದಲ್ಲಿದ್ದಾರೆ. ತಾರೆಯರು ಕೆಲವು ವಾರಗಳಿಂದ ನ್ಯೂಯಾರ್ಕ್ ಪ್ರವಾಸ ಮಾಡುತ್ತಿದ್ದಾರೆ. ಆದರೆ ಅವರು ಪ್ರಸ್ತುತ ನ್ಯೂಯಾರ್ಕ್‌ನಲ್ಲಿರುವ ರಶೀದ್ ಖಾನ್ ಅವರನ್ನು ಭೇಟಿಯಾದರು.

    ಈ ಫೋಟೋವನ್ನು ರಶೀದ್ ಖಾನ್ ತಮ್ಮ ಇನ್​​ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಣಬೀರ್‌ನ ಕೈಯನ್ನು ರಶೀದ್ ಖಾನ್‌ನ ಭುಜದ ಮೇಲೆ ಇರಿಸಲಾಗಿದೆ ಮತ್ತು ಅವನ ಇನ್ನೊಂದು ಕೈ ತನ್ನ ತೋರು ಬೆರಳನ್ನು ರಶೀದ್ ಕಡೆಗೆ ತೋರಿಸುತ್ತಿದೆ. ಇದರಲ್ಲಿ ರಶೀದ್ ಖಾನ್ ಮತ್ತು ಆಲಿಯಾ ಭಟ್ ಇಬ್ಬರೂ ಕಪ್ಪು ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರೆ, ರಣಬೀರ್ ಬೂದು ಬಣ್ಣದ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts