ಧಾರವಾಡ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್ ಪಿಚ್‌ಗಳಲ್ಲಿ ತಮ್ಮದೇ ಆಗಿರುವ ಆಟದ ವೈಖರಿಯನ್ನು ಪ್ರದಶರ್ನ ಮಾಡುತ್ತಿರುವುದು ಗೊತ್ತಿರುವ ವಿಚಾರ. ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್, ಧಾರವಾಡದ ಬಡ ಬಾಲಕಿಗೆ ಸಹಾಯ ಹಸ್ತ ಚಾಚಿದ್ದು, ಆಕೆಗೆ ಆರ್ಥಿಕ ನೆರವು ನೀಡಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಧಾರವಾಡದ ಸಿದ್ದೇಶ್ವರ ಕಾಲೋನಿಯಲ್ಲಿರುವ ಹನುಮಂತಪ್ಪಾ ಹಾಗೂ ಸುಮಿತ್ರಾ ಕುಟುಂಬದ ಕಷ್ಟವನ್ನು ತಿಳಿದ ಬಿಜೆಪಿ ಮುಖಂಡ ಹಾಗೂ ಸಮಾಜಸೇವಕ ಮಂಜುನಾಥ ಹೆಬಸೂರು ಖ್ಯಾತ ಕ್ರಿಕೇಟಿಗ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದರು.
ಕನ್ನಡಿಗ ಕೆಎಲ್ ರಾಹುಲ್, ಧಾರವಾಡದ ಸಿದ್ದೇಶ್ವರ ಕಾಲೋನಿಯಲ್ಲಿರುವ ಹನುಮಂತಪ್ಪಾ ಹಾಗೂ ಸುಮಿತ್ರಾ ದಂಪತಿಯ ಮಗಳು ಸೃಷ್ಟಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಭವಿಷ್ಯದಲ್ಲಿ ಡಾಕ್ಟರ್ ಆಗುವ ಕನಸು ಕಂಡಿರುವ ಪುಟ್ಟ ಬಾಲಕಿ ಸೃಷ್ಟಿ ಕನಸಿಗೆ ಇದೀಗ ರಾಹುಲ್ ಬೆಳಕಾಗಿ ಬಂದಿದ್ದಾರೆ. ವಿದ್ಯಾಭ್ಯಾಸದಿಂದ ವಂಚಿತವಾಗುವ ಹಂತದಲ್ಲಿದ್ದ ಸೃಷ್ಟಿಯ ಬಾಳಲ್ಲಿ ಈಗ ಮಂದಹಾಸ ಮೂಡಿದೆ.
1996 ರಲ್ಲಿ ದೀಪಕ ಗಾಂವ್ಕರ್ ಹಾಗೂ ಅನೀತಾ ಗಾಂವ್ಕರ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್ ಎಕ್ಸಲೆನ್ಸ್ ಶಾಲೆ ಉತ್ತಮ ಹೆಸರು ಪಡೆದುಕೊಂಡಿದ್ದು, ಈ ಶಾಲೆಯಲ್ಲಿ ಸೃಷ್ಟಿ ಕುಲಾವಿ ವ್ಯಾಸಾಂಗ ಮಾಡಲು ರಾಹುಲ್ ಅವರು ನೆರವು ನೀಡಿದ್ದಾರೆ. ಇದೊಂದು ನಮ್ಮ ಶಾಲೆಗೆ ಹಾಗೂ ನಮಗೂ ಹೆಮ್ಮೆ ಎಂದು ಶಾಲೆಯ ಪ್ರಾಂಶುಪಾಲರಾದ ಮಾಲಾಶ್ರಿ ನಯ್ಯರ್ ಹೇಳಿದ್ದಾರೆ.
ರಾಜಕೀಯ ಕಾರ್ಯಕರ್ತ ಮಂಜುನಾಥ್ ಹೆಬಸೂರ್ ಮಾತನಾಡಿದ , ಕೆಎಲ್ ರಾಹುಲ್ ಅವರು ಬಾಲಕಿಗೆ ಓದಲು ಸಹಾಯ ಮಾಡಿದ್ದಾರೆ. ಬಾಲಕಿಯ ಅಗತ್ಯತೆಗಳನ್ನು ಕಂಡಾಗ, ಅವರು ಹುಡುಗಿಗೆ ಸಹಾಯ ಮಾಡಲು ಒಪ್ಪಿದರು. ನಮಗೆಲ್ಲಾ ತುಂಬಾ ಖುಷಿಯಾಗಿದೆ ಹೇಳಿದ್ದಾರೆ.
ಹಣದ ಕೊರತೆಯಿಂದ ಖಾಸಗಿ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ತೊಂದರೆ ಅನುಭವಿಸುತ್ತಿದ್ದರು. “ಬಾಲಕಿಯ ತಂದೆ ಹನುಮಂತಪ್ಪ ಕುವಲಿ ನನಗೆ ಕರೆ ಮಾಡಿ ಸಹಾಯ ಕೇಳಿದರು. ನಾನು ಕೆಲವು ಸ್ನೇಹಿತರೊಂದಿಗೆ ಚರ್ಚಿಸಿ ಅಂತಿಮವಾಗಿ ಕೆಎಲ್ ರಾಹುಲ್ ಅವರ ಗಮನಕ್ಕೆ ತಂದೆ. ನಂತರ ಅವರು ಸಮಸ್ಯೆಯನ್ನು ಆಲಿಸಿ, ತಕ್ಷಣ ಸಹಾಯ ಮಾಡಲು ಒಪ್ಪಿಕೊಂಡರು. ಅವರು ಕೆಲವು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೇರಿದಂತೆ ಇತರ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ” ಎಂದು ಅವರು ಹೇಳಿದರು.
ಬಾಲಕಿ ಪ್ರವೇಶ ಪಡೆದ ಶಾಲೆಯ ಶಿಕ್ಷಕರೊಬ್ಬರು ಮಾತನಾಡಿ, ಹನುಮಂತಪ್ಪ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗದೆ ಸಣ್ಣ ವ್ಯಾಪಾರ ನಡೆಸುತ್ತಿದ್ದಾರೆ. ಕೆಎಲ್ ರಾಹುಲ್ ಬಡ ವಿದ್ಯಾರ್ಥಿಗೆ ಸಹಾಯ ಮಾಡಿದ್ದು ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ಹನುಮಂತಪ್ಪ ಅವರ ಸಂಬಂಧಿಯೊಬ್ಬರು ಮಾತನಾಡಿ, ರಾಹುಲ್ ಯಾವುದೇ ಪ್ರಚಾರ, ಸುದ್ದಿ ಮಾಡದೆ ಜನರಿಗೆ ಸಹಾಯ ಮಾಡುತ್ತಾರೆ. ಅವರು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಅವರು ಪ್ರಚಾರದ ಹಿಂದೆ ಬಿದ್ದಿಲ್ಲ. ಇದು ಕೇವಲ ಹಣದ ಪ್ರಶ್ನೆಯಲ್ಲ. ಅವರು ಎಷ್ಟು ಕರುಣೆ ಮತ್ತು ಒಳ್ಳೆಯ ಹೃದಯದ ವ್ಯಕ್ತಿ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪುರಿ ಜಗನ್ನಾಥ ದೇಗುಲಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್; ಹರಿದ ಜೀನ್ಸ್, ಸ್ಲೀವ್ಲೆಸ್ ಉಡುಪು ಧರಿಸುವುದು ನಿಷೇಧ