ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್​ ತ್ರಿಶತಕ ಸಿಡಿಸಿದ್ದ ಬ್ಯಾಟರ್ ನಿಧನ!

blank

ಮೆಲ್ಬೋರ್ನ್: ಆಸ್ಟ್ರೇಲಿಯಾ ನೆಲದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಹೊಂದಿರುವ ಎಡಗೈ ಬ್ಯಾಟರ್ ಬಾಬ್ ಕೌಪರ್ (84 ವರ್ಷ) ಅನಾರೋಗ್ಯದ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಭಾನುವಾರ ತಿಳಿಸಿದೆ. ಅವರು ಪತ್ನಿ ಡೇಲ್ ಮತ್ತು ಪುತ್ರಿಯರಾದ ಒಲಿವಿಯಾ, ಸೆರಾರನ್ನು ಅಗಲಿದ್ದಾರೆ.

blank

1964ರಿಂದ 1968ರ ನಡುವೆ ಆಸೀಸ್ ಪರ 27 ಟೆಸ್ಟ್ ಪಂದ್ಯಗಳನ್ನಾಡಿದ್ದ ಕೌಪರ್, 46.84ರ ಸರಾಸರಿಯಲ್ಲಿ 5 ಶತಕಗಳ ಸಹಿತ 2,061 ರನ್‌ಗಳಿಸಿದ್ದರು. ಅರೆಕಾಲಿಕ ಆ್ ಸ್ಪಿನ್ನರ್ ಆಗಿ 36 ವಿಕೆಟ್ ಸಹ ಕಬಳಿಸಿದ್ದರು. ಬ್ಯಾಟಿಂಗ್ ಶೈಲಿ ಹಾಗೂ ಸ್ಥಿರ ನಿರ್ವಹಣೆಗೆ ಹೆಸರುವಾಸಿಯಾಗಿದ್ದ ಕೌಪರ್, 1966ರಲ್ಲಿ ಇಂಗ್ಲೆಂಡ್ ಎದುರು ಎಂಸಿಜಿಯಲ್ಲಿ 12 ಗಂಟೆ ಬ್ಯಾಟಿಂಗ್ ನಡೆಸಿ, 589 ಎಸೆತಗಳಲ್ಲಿ 307 ರನ್‌ಗಳಿಸಿದ್ದರು. ಜತೆಗೆ ಡಾನ್ ಬ್ರಾಡ್ಮನ್ ಬಳಿಕ ಆಸೀಸ್ ನೆಲದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ (75.78) ಹೊಂದಿರುವ ಆಟಗಾರ ಎನಿಸಿದ್ದಾರೆ. ನಿವೃತ್ತಿಯ ನಂತರ ಐಸಿಸಿ ಮ್ಯಾಚ್ ರೆಫ್ರಿಯೂ ಆಗಿದ್ದರು.

Share This Article
blank

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

ನಿಮ್ಮ ಪತಿ ಬಿಗಿಯಾದ ಬೆಲ್ಟ್ ಧರಿಸುತ್ತಿದ್ದಾರಾ? ಅವರಿಗೆ ಈ ಕುರಿತಾಗಿ ಜಾಗೃತಿ ಮೂಡಿಸಿ..belt

belt: ಇತ್ತೀಚಿನ ದಿನಗಳಲ್ಲಿ ಬೆಲ್ಟ್ ಧರಿಸುವುದು ಸಾಮಾನ್ಯ. ಆದರೆ, ಬೆಲ್ಟ್ ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು…

blank