ಕಾರ್ಕಳ: ಭಾರತದ ಬಹುತ್ವದ ಕೃಷಿ. ಸಾವಯವ ಕೃಷಿ ಬೆಂಬಲಿಸಿದರೆ ಮಾತ್ರ ಮಾನವ ಸಂಕುಲ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಡಾ.ನರೇಂದ್ರ ರೈ.ದೇರ್ಲ ಹೇಳಿದರು.
‘ಒಂದು ಬೊಗಸೆ ಹಸಿರು’ ಶೀರ್ಷಿಕೆಯಡಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜು ಸಪ್ತಸ್ವರ ವೇದಿಕೆಯಲ್ಲಿ ಕ್ರಿಯೇಟಿವ್ ಸ್ಫೂರ್ತಿ ಮಾತು 6ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್., ಬೋಧಕ ವರ್ಗ, ವಸತಿನಿಲಯ ಪಾಲಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ನಿರೂಪಿಸಿದರು.